MUST READ| ತರಕಾರಿ ತಿನ್ನೋಕೂ ಯೋಚಿಸುವಂತೆ ಮಾಡ್ತಿದೆ ಈ ವರದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಸ್ಯಾಹಾರಿಗಳಿರಲಿ, ಮಾಂಸಾಹಾರಿಗಳಿರಲಿ ತರಕಾರಿಯನ್ನು ಆಹಾರವಾಗಿ ಬಳಸಿಯೇ ಬಳಸುತ್ತಾರೆ. ಸಸ್ಯಾಹಾರಿಗಳು ತರಕಾರಿಗಳಿಗೇ ಅವಲಂಬಿತರಾದರೆ, ಮಾಂಸಾಹಾರಿಗಳು ಮಾಂಸಾಹಾರದ ಜೊತೆಗೆ ಕೆಲವು ದಿನಗಳಲ್ಲಂತೂ ಸಸ್ಯಾಹಾರಕ್ಕೆ ತೃಪ್ತರಾಗುತ್ತಾರೆ. ಪ್ರತಿಯೊಬ್ಬರಿಗೂ ತರಕಾರಿ ಬೇಕೇ ಬೇಕು.

ಪ್ರತೀ ಮನೆಯಲ್ಲೂ ಎಳೆಯ ಮಕ್ಕಳಿಂದ ಹಿಡಿದು ವೃದ್ದರ ತನಕ ಹಣ್ಣುಗಳನ್ನು ಸೇವಿಸುತ್ತಾರೆ. ಆದರೆ ಇದೀಗ ನಾವು ಬಳಸುವ ತರಕಾರಿ ಹಣ್ಣು ಯಾವುದೂ ಸುರಕ್ಷಿತವಾಗಿಲ್ಲ ಎಂಬ ಆಘಾತಕಾರಿ ಸತ್ಯವೊಂದು ಗೊತ್ತಾಗಿದೆ. ಇದು ಕೇರಳದಲ್ಲಿ ಪತ್ತೆಯಾಗಿದ್ದರೂ, ಕರ್ನಾಕಟವೇನೂ ಇದಕ್ಕೆ ಹೊರತಾಗಿಲ್ಲ. ತರಕಾರಿ ಅಂಗಡಿಗಳಿಗೆ ಹೊರರಾಜ್ಯಗಳಿಂದ ತರಕಾರಿಗಳು ಬರುತ್ತವೆ. ಈ ತರಕಾರಿಗಳು ಯಾವುದು ಆರೋಗ್ಯಕರವಲ್ಲ.

ಅಧ್ಯಯನದ ವರದಿಯೊಂದು ಈ ವಾಸ್ತವ ಸತ್ಯವನ್ನು ಹೊರಹಾಕಿದೆ. ಕೇರಳಕ್ಕೆ ಆಗಮಿಸುತ್ತಿರುವ ಅಪಾರ ಪ್ರಮಾಣದ ತರಕಾರಿ ಹಾಗೂ ಹಣ್ಣುಗಳಲ್ಲಿ ಅಪಾಯಕಾರಿ ವಿಷ ಪದಾರ್ಥ ಪತ್ತೆಯಾಗಿವೆ. ಸೇಫ್ ಟು ಈಟ್ ಯೋಜನೆಯಡಿ ಕೃಷಿ ವಿಶ್ವವಿದ್ಯಾನಿಲಯವು ನಡೆಸುತ್ತಿರುವ ಅಧ್ಯಯನದಲ್ಲಿ ಈ ಆಘಾತಕಾರಿ ಅಂಶ ಹೊರಬಿದ್ದಿದೆ. 35ಕ್ಕಿಂತ ಹೆಚ್ಚು ತರಕಾರಿಗಳು ವಿಷಕಾರಿ ಎಂಬ ಅಂಶ ಬಹಿರಂಗ ಗೊಂಡಿದೆ.

ಮಸಾಲೆಯೂ ವಿಷಕಾರಿ! : ಹಣ್ಣುಗಳು ಮತ್ತು ಮಸಾಲೆಗಳು ಸಹ ವಿಷಕಾರಿಯಾಗಿದ್ದು ಇದರಿಂದಾಗಿ ಅನಾಹುತ ಸಂಭವಿಸಬಹುದಾಗಿದೆ ಎಂದು ವರದಿ ಹೇಳಿದೆ. ಯೋಜನೆಯ 57ನೇ ವರದಿಯ ಪ್ರಕಾರ, ಹಸಿರು ಪಾಲಕ್, ಬಾಜಿಮುಲಾಕ್, ಕ್ಯಾಪ್ಸಿಕಂ, ಕೋಸುಗಡ್ಡೆ, ಬಿಳಿಬದನೆ ಮತ್ತು ಸಾಂಬಾರ್ ಮೆಣಸಿನಕಾಯಿಯಂತಹ ತರಕಾರಿಗಳಲ್ಲಿ ಹೆಚ್ಚಿನ ವಿಷಕಾರೀ ಕೀಟನಾಶಕಗಳು ಪತ್ತೆಯಾಗಿವೆ.

ಸಾಮಾನ್ಯ ಮಾರುಕಟ್ಟೆಗೆ ಹೋಲಿಸಿದರೆ ರೈತರಿಂದ ನೇರವಾಗಿ ಸಂಗ್ರಹಿಸಿದ ತರಕಾರಿಗಳು ಕಡಿಮೆ ವಿಷ ಹೊಂದಿವೆ ಎಂದು ವರದಿ ಹೇಳಿದೆ. ರೈತರಿಂದ ನೇರವಾಗಿ ಪಡೆದ ತರಕಾರಿಯಲ್ಲಿ27.47 ರಷ್ಟು ವಿಷತ್ವ ಪತ್ತೆಯಾಗಿದೆ. ಸಾವಯವ ಎಂಬ ಹೆಸರಿನಲ್ಲಿ ಮಾರಾಟ ಮಾಡುವ ಅಂಗಡಿಯ ತರಕಾರಿಗಳು ಈ ರೀತಿಯ ವಿಷಕಾರಿ ಅಂಶವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಹೊಂದಿದೆ ಎಂದು ಹೇಳಲಾಗಿದೆ. ವಾಣಿಜ್ಯ ಹಣ್ಣುಗಳಾದ ರೋಬಸ್ಟಾ, ಸಪೋಟಾ ಮತ್ತು ಒಣದ್ರಾಕ್ಷಿಗಳಲ್ಲಿ ಶೇ.50ರಷ್ಟು ಕೀಟನಾಶಕಗಳಿವೆ. ಏಲಕ್ಕಿ, ಪುಡಿಮಾಡಿದ ಮೆಣಸು ಮತ್ತು ಕಾಶ್ಮೀರಿ ಮೆಣಸಿನಕಾಯಿಗಳಂತಹ ಮಸಾಲೆಗಳಲ್ಲೂ ವಿಷವಿದೆ. ಅಧ್ಯಯನಕ್ಕಾಗಿ ಒಟ್ಟು 868 ಮಾದರಿಗಳನ್ನು ಪರೀಕ್ಷಿಸಿ ಈ ಸತ್ಯವನ್ನು ಹೊರಗೆ ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!