ಟಿವಿಯಲ್ಲಿ ಮೋದಿ ಫೋಟೊ ಕಂಡರೆ, ಆ ಮನೆಗೆ ದಾರಿದ್ರ್ಯಅಂಟಿದಂತೆಯೇ: ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾರ ಮನೆಯ ಟಿವಿಯಲ್ಲಿ ನರೇಂದ್ರ ಮೋದಿ ಫೋಟೊ ಕಾಣಿಸುತ್ತದೆಯೋ, ಆ ಮನೆಗೆ ದಾರಿದ್ರ್ಯ ಅಂಟುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನರೇಂದ್ರ ಮೋದಿ (Narendra Modi) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ನೀವು ಬೆಳಗ್ಗೆ ಎದ್ದೇಳುತ್ತಲೇ ಟಿವಿ ಆನ್‌ ಮಾಡಿದರೆ ಸಾಕು, ನರೇಂದ್ರ ಮೋದಿ ಅವರ ಫೋಟೊ ಕಾಣಿಸುತ್ತದೆ. ಯಾರ ಮನೆಯ ಟಿವಿಯಲ್ಲಿ ಮೋದಿ ಫೋಟೊ ಕಾಣಿಸುತ್ತದೆಯೋ, ಆ ಮನೆಗೆ ದಾರಿದ್ರ್ಯ ಅಂಟಿದಂತೆಯೇ ಎಂದು ಹೇಳಿದ್ದಾರೆ. ಖರ್ಗೆ ಅವರು ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಅವರ ಫೋಟೊ ನೋಡಿದರೆ, ಆ ಮನೆಗೆ ದಾರಿದ್ರ್ಯ ಅಂಟುತ್ತದೆ. ಏಕೆಂದರೆ, ನರೇಂದ್ರ ಮೋದಿ ಅವರಿಗೆ ಬಡವರು ಎಂದರೆ ಆಗಿಬರುವುದಿಲ್ಲ. ನರೇಂದ್ರ ಮೋದಿ ಅವರು ವಿಕಾಸವನ್ನು ಬಯಸುವುದಿಲ್ಲ. ಬಡವರು ಏಳಿಗೆ ಹೊಂದುವುದು ಅವರಿಗೆ ಇಷ್ಟವಿಲ್ಲ. ಬಡವರ ಮಕ್ಕಳು ಶಿಕ್ಷಣ ಪಡೆಯುವುದು ಅವರಿಗೆ ಇಷ್ಟವಾಗುವುದಿಲ್ಲ. ಏಕೆಂದರೆ, ಬಡವರು ಓದಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಂಡರೆ ಅವರಿಗೆ ಕಷ್ಟವಾಗುತ್ತದೆ. ಹಾಗಾಗಿ, ಅವರು ಯಾವಾಗಲೂ ಬಡವರ ಮಕ್ಕಳ ವಿರುದ್ಧ ನಿಲುವು ತಾಳುತ್ತಾರೆ ಎಂದು ಖರ್ಗೆ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

3 COMMENTS

  1. ಇವನ ಮುಖ ನೋಡಿದ್ರೆ ಅಪಶಕುನದಂತೆ. ಇಂಥಾ ದರಿದ್ರ ಮುಖಗಳಿಂದ ಕಾಂಗ್ರೆಸ್ ಇಂಥಾ ಸ್ಥಿತಿಗೆ ಬಂದಿರೋದು. ಒಬ್ಬ ದೇಶದ ಪ್ರಧಾನ ಮಂತ್ರಿಬಗ್ಗೆ ಇಂಥ ದುಸ್ತಮಾನಸ್ತಿತಿ ಇರೋರು ನಮ್ಮ ದೇಶಕ್ಕೆ ಮಾರಕ.

  2. ಯಾರಮೇಲೆ ಯಾರಿಗೆ ದ್ವೇಷ ಇರುತ್ತದೆಯೋ ಅಂಥಹವರಿಗೆ ಎಲ್ಲಾ ಇದೇ ತರಹ ಕಾಮಾಲೆ ಕಣ್ಣುಗಳು

  3. Yes Mr.mallikajuna kargeji. I am a 72 year old after modiji comes to power from last 10 years year on year my income is raising and I am paying around 90000 p.a. this is the strength of modiji.

LEAVE A REPLY

Please enter your comment!
Please enter your name here

error: Content is protected !!