ಹೈ ಬಿಪಿಯಂತೆ, ಲೋ ಬಿಪಿಯನ್ನೂ ನಿರ್ಲಕ್ಷಿಸಬಾರದು. ಏಕೆಂದರೆ ಅದು ಮಾರಕವಾಗುತ್ತದೆ. ನಿಮಗೆ ಕಡಿಮೆ ಬಿಪಿ ಇದ್ದರೆ, ನೀವು ಯಾವ ಲಕ್ಷಣಗಳನ್ನು ಅನುಭವಿಸಬಹುದು?
ಲೋ ಬಿಪಿ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತಿಲ್ಲ. ಸಾಮಾನ್ಯವಾಗಿ ಆರೋಗ್ಯವಂತ ಜನರಲ್ಲಿ ರಕ್ತದೊತ್ತಡ 120/80 mmHg ಇರಬೇಕು. ಮತ್ತು ಅದು 90/60 mmHg ಅಥವಾ ಅದಕ್ಕಿಂತ ಕಡಿಮೆ ಇದ್ದಾಗ ಅದನ್ನು ಕಡಿಮೆ ಬಿಪಿ ಎಂದು ಕರೆಯಲಾಗುತ್ತದೆ. ಲೋ ಬಿಪಿಯಿಂದ ಕೆಲವು ಸಾಮಾನ್ಯ ಸಮಸ್ಯೆಗಳು ಹಾಗೂ ಗಂಭೀರ ಪರಿಣಾಮಗಳು ಉಂಟಾಗುತ್ತವೆ.
- ತಲೆ ತಿರುಗುವಿಕೆ, ಮೂರ್ಛೆ ಹೋಗುವುದು
- ಆಯಾಸ, ಆಲಸ್ಯ
- ವಾಕರಿಕೆ, ವಾಂತಿ
- ತ್ವರಿತ ಹೃದಯ ಬಡಿತ
- ಎದೆ ನೋವು
- ಉಸಿರಾಟದ ತೊಂದರೆ
- ಮಸುಕಾದ ಚರ್ಮ
- ಕಿಡ್ನಿ ಸಮಸ್ಯೆಗಳು
- ದೃಷ್ಟಿ ಮಸುಕಾಗುವುದು