ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ತಿನ್ನೋದನ್ನು ನೋಡೋದೇ ಒಂದು ಖುಷಿ, ಅದರಲ್ಲಿಯೂ ಅಪ್ಪ ಅಮ್ಮನ ಸೂಚನೆಗಳಿಲ್ಲದೆ ಮನಸ್ಸಿಗೆ ಬಂದಂತೆ ಮಕ್ಕಳು ತಿನ್ನುವುದು ನೋಡುವುದಕ್ಕೆ ತುಂಬಾನೇ ಖುಷಿ.
ಇದೇ ರೀತಿ ಮಗುವೊಂದು ಕೇಕ್ ತಿನ್ನುವ ವಿಡಿಯೋ ವೈರಲ್ ಆಗಿದ್ದು, ಇದೇ ರೀತಿ ನಾವು ಕೇಕ್ ತಿನ್ನಬೇಕು ಅಂತಿದ್ದಾರೆ ನೆಟ್ಟಿಗರು. ವಿಡಿಯೋದಲ್ಲಿ ಮಗುವಿನ ಮುಂದೆ ಕೇಕ್ ಒಂದನ್ನು ಇಟ್ಟಿದ್ದು, ಮಗು ಮುಖದ ತುಂಬಾ ಕೇಕ್ ಮೆತ್ತಿಕೊಂಡು ತಿನ್ನುತ್ತಿದೆ. ಮಗುವಿನ ಖುಷಿ ಹಾಗೂ ಹೊಸತೇನನ್ನೋ ನೋಡುತ್ತಿದ್ದೇನೆ ಎಂಬ ಖುಷಿ ಅದರ ಕಣ್ಣಲ್ಲಿ ಕಾಣುತ್ತಿದೆ.
ವಿಡಿಯೋ ವೈರಲ್ ಆಗಿದ್ದು, 60 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಇಷ್ಟಪಟ್ಟಿದ್ದಾರೆ. ನಮಗೂ ಹೀಗೆಲ್ಲಾ ಮಾಡೋಕೆ ಇಷ್ಟ ಆದರೆ ನಮ್ಮ ವಯಸ್ಸು ಒಂದಲ್ಲ, ನಲವತ್ತೊಂದು ಎಂದು ನೆಟ್ಟಿಗರು ಹಾಸ್ಯ ಮಾಡಿದ್ದಾರೆ.