ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಮೆಟ್ರೋದಲ್ಲಿ ಅಸಭ್ಯ ವರ್ತನೆ ತೋರಿರುವ ಪ್ರಕರಣಗಳು ದಾಖಲಾಗಿದ್ದು, ಇದನ್ನು ತಡೆಯೋದಕ್ಕೆ ಮೆಟ್ರೋ ನೂತನ ಪ್ಲ್ಯಾನ್ ರೆಡಿ ಮಾಡಿದೆ.
ಯಾವುದೇ ರೀತಿ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ನಿವಾರಣೆ ಮೆಟ್ರೋ ಮುಂದಾಗಿದ್ದು, ಕೆಟ್ಟ ವರ್ತನೆ ತೋರೋರಿಗೆ ಬರೀ 500 ರೂಪಾಯಿ ಅಲ್ಲ 10,000 ರೂಪಾಯಿ ದಂಡ ಹಾಕಲು ನಿರ್ಧರಿಸಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ಆದೇಶ ಹೊರಡಿಸಿದ್ದು, ಕಾಮುಕರಿಗೆ ಬಿಗ್ ಶಾಕ್ ಆಗಿದೆ. ಈ ಹಿಂದೆ ಲೈಂಗಿಕ ಕಿರುಕುಳ ತೋರುವವರಿಗೆ ಬರೀ 500 ರೂಪಾಯಿ ದಂಡ ವಿಧಿಸಲಾಗಿತ್ತು. ಈ ದಂಡವನ್ನು ಪರಿಷ್ಕರಣೆ ಮಾಡಿದ್ದು, ಇದೀಗ 10,000 ದಂಡ ವಸೂಲಿ ಮಾಡಲಾಗುತ್ತದೆ.