ಶಾಂತಿಯುತ ಜೀವನ ಬೇಕೇ ರೊಟ್ಟಿ ತಿನ್ನಿ…ಇಲ್ಲವೇ ನಮ್ಮ ಬುಲೆಟ್‌ ಯಾವಾಗಲೂ ಸಿದ್ಧವಾಗಿರುತ್ತೆ: ಪಾಕ್ ಗೆ ಮೋದಿ ಖಡಕ್ ಎಚ್ಚರಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಿಮಗೆ ಶಾಂತಿಯುತ ಜೀವನ ಬೇಕೇ ನಿಮ್ಮ ಬ್ರೆಡ್‌ (ರೊಟ್ಟಿ) ತಿನ್ನಿ ಇಲ್ಲದಿದ್ದರೆ ನನ್ನ ಬುಲೆಟ್‌ಗಳು ಯಾವಾಗಲೂ ಸಿದ್ಧವಾಗಿರುತ್ತೆ.. ಇದು ಪಾಕ್ ಗೆ ಪ್ರಧಾನಿ ಮೋದಿಯ ಖಡಕ್ ಎಚ್ಚರಿಕೆ …

ಹೌದು, ಗುಜರಾತ್‌ನ ಭುಜ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯನ್ನ ಕೈಬಿಡದಿದ್ರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ ಎಂದು ಪಾಕಿಸ್ತಾನ ಸರ್ಕಾರ , ಪಾಕ್‌ ಸೇನೆಗೆ ಎಚ್ಚರಿಕೆ ನೀಡಿದ್ದಾರೆ.

ನೀವು ಶಾಂತಿಯುತ ಜೀವನ ಬಯಸಿದ್ರೆ ನಿಮ್ಮ ಬ್ರೆಡ್‌ (ರೊಟ್ಟಿ) ತಿಂದು ಸುಮ್ಮನಿರಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು ಯಾವಾಗಲೂ ಸಿದ್ಧವಾಗಿರುತ್ತೆ. ಯಾವುದು ಬೇಕು ನೀವೇ ಆಯ್ಕೆ ಮಾಡಿಕೊಳ್ಳಿ ಅಂತ ಪಾಕ್‌ಗೆ ವಾರ್ನಿಂಗ್‌ ನೀಡಿದರು.

ನಮ್ಮ ರಕ್ತ ಚೆಲ್ಲಲು ಪ್ರಯತ್ನಿಸುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಭಾರತ ಸಿದ್ಧವಿದೆ. ಭಾರತದ ಮೇಲೆ ಕಣ್ಣುಹಾಕುವವರು ಬೆಲೆ ತೆರಲೇಬೇಕಾಗುತ್ತದೆ ಎಂದರಲ್ಲದೇ, ಭಯೋತ್ಪಾದನೆಯನ್ನ ಬುಡಸಮೇತ ನಿರ್ಮೂಲನೆ ಮಾಡುವುದು ಮತ್ತು ಮಾನವೀಯತೆಯನ್ನ ರಕ್ಷಿಸುವುದು ಆಪರೇಷನ್‌ ಸಿಂದೂರ ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮವು ಜನರನ್ನು ಸಂಪರ್ಕಿಸುತ್ತದೆ, ಬಹುರಾಷ್ಟ್ರೀಯ ಸ್ನೇಹವನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ಭಾರಯ ಪ್ರವಾಸೋದ್ಯಮದಲ್ಲಿ ನಂಬಿಕೆಯಿಡುತ್ತದೆ. ಆದ್ರೆ ಪಾಕಿಸ್ತಾನವು ಭಯೋತ್ಪಾದನೆಯನ್ನೇ ಪ್ರವಾಸೋದ್ಯಮವೆಂದು ಪರಿಗಣಿಸಿದೆ. ಇದು ಇಡೀ ವಿಶ್ವಕ್ಕೆ ಮಾರಕ ಹಾಗೂ ದೊಡ್ಡ ಬೆದರಿಕೆಯಾಗಿದೆ. ಆದ್ರೆ ಆಪರೇಷನ್‌ ಸಿಂದೂರ ಭಯೋತ್ಪಾದನೆಯನ್ನು ಬುಡಸಮೇತ ಕೊನೆಗೊಳಿಸುವ ಧ್ಯೇಯ ಹೊಂದಿದೆ ಎಂದು ಗುಡುಗಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!