Wednesday, December 24, 2025

ಟ್ರಾಫಿಕ್‌ ಜಾಮ್‌ನಿಂದ ತಪ್ಪಿಸಿಕೊಳ್ಳಬೇಕಂದ್ರೆ ಬೆಂಗಳೂರಿನ ಈ ರಸ್ತೆಗಳಲ್ಲಿ ನಾಳೆ ಓಡಾಡ್ಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು (ಡಿ.24) ಮತ್ತು ನಾಳೆ (ಡಿ.25) ಬೆಂಗಳೂರಿನಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಜೋರಾಗಿ ಇರುತ್ತದೆ. ಬೆಂಗಳೂರಿನ ಕೆಲವೊಂದು ಭಾಗದಲ್ಲಿ ಅದ್ದೂರಿಯಾಗಿ ಕ್ರಿಸ್‌ಮಸ್ ಆಚರಣೆ ಮಾಡಿಕೊಳ್ಳುತ್ತಾರೆ. ಇಂದಿನಿಂದಲೇ ಬೆಂಗಳೂರಿನಲ್ಲಿ ಆಚರಣೆ ಶುರುವಾಗುತ್ತದೆ.

ಜತೆಗೆ ನಾಳೆ ಅಂದರೆ ಡಿ.25ರಂದು ರಜೆ ಇರುವ ಕಾರಣ, ಬೆಂಗಳೂರಿನ ಬೀದಿಗಳು ಜನರಿಂದ ತುಂಬಿರುತ್ತದೆ. ಹೀಗಾಗಿ ವಾಹನ, ಜನ ದಟ್ಟಣೆ ಕೂಡ ಹೆಚ್ಚಾಗಿರುತ್ತದೆ. ಅದಕ್ಕಾಗಿ ಸಂಚಾರಿ ಪೊಲೀಸ್​​​ ಇಲಾಖೆ ಸಂಚಾರ ಸಲಹೆಯನ್ನು ನೀಡಿದೆ.

ಪುಲಕೇಶಿನಗರದ ಹೋಲಿ ಗೋಸ್ಟ್ ಚರ್ಚ್ ಮತ್ತು ಮಹಾದೇವಪುರದ ಫೀನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನ ಬಳಿ ಭಾರಿ ಜನದಟ್ಟಣೆ ಆಗುವ ಸಾಧ್ಯತೆಗಳು ಇದೆ. ಅದಕ್ಕಾಗಿ ವಾಹನ ಚಾಲಕರು ತಮ್ಮ ಪ್ರಯಾಣವನ್ನು ಈ ರಸ್ತೆಗಳಲ್ಲಿ ತಪ್ಪಿಸುವುದು ಸೂಕ್ತ ಎಂದು ಹೇಳಲಾಗಿದೆ. ಡಿಸೆಂಬರ್ 24 ರಂದು ಸಂಜೆ 7 ಗಂಟೆಯಿಂದ ಡಿಸೆಂಬರ್ 25 ರಂದು ಮಧ್ಯಾಹ್ನ 12 ರವರೆಗೆ ಜಾನ್ ಆರ್ಮ್‌ಸ್ಟ್ರಾಂಗ್ ರಸ್ತೆ ಜಂಕ್ಷನ್ ಮತ್ತು ಕುಕ್ಸನ್ ರಸ್ತೆ ಜಂಕ್ಷನ್ ನಡುವಿನ ಸಂಚಾರಕ್ಕೆ ಡೇವಿಸ್ ರಸ್ತೆಯನ್ನು ಮುಚ್ಚಲಾಗುವುದು.

ಪೊಲೀಸರ ಪ್ರಕಾರ, ಹಬ್ಬ ಇರುವ ಕಾರಣ ಜನದಟ್ಟಣೆ ಆಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ, ಸುಗಮ ವಾಹನ ಸಂಚಾರಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 24ರ ಸಂಜೆಯಿಂದ ಡಿಸೆಂಬರ್ 25 ರ ಮಧ್ಯಾಹ್ನದವರೆಗೆ ಹೋಲಿ ಗೋಸ್ಟ್ ಚರ್ಚ್‌ನಲ್ಲಿ ದೊಡ್ಡ ಜನ ದಟ್ಟಣೆ ಆಗುವ ನಿರೀಕ್ಷೆಯಿದೆ, ಹಾಗಾಗಿ ಕೆಲವೊಂದು ಸಂಚಾರ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

error: Content is protected !!