February 4, 2026
Wednesday, February 4, 2026
spot_img

SHOPPING 🛍️| ಖರೀದಿ ಮಾಡೋದೇ ಆದ್ರೆ ಹೀಗೆ ಮಾಡಿ, ಸ್ಪೆಷಲ್‌ ಟಿಪ್ಸ್‌ ನಿಮಗಾಗಿ

ಶಾಪಿಂಗ್‌ ಪ್ರಿಯರೇ ನೀವು ಶಾಪಿಂಗ್‌ ಮಾಡ್ಲೇಬೇಕು ಅಂತಾದ್ರೆ ಕೆಲವೊಂದು ರೂಲ್ಸ್‌ ಫಾಲೋ ಮಾಡಿ, ಇದರಿಂದ ನಿಮಗೆ ಲಾಭ ಆಗುತ್ತದೆ. ಯಾವ ರೀತಿ ಶಾಪಿಂಗ್‌ ಮಾಡಿದರೆ ಬೆಸ್ಟ್‌? ಇಲ್ಲಿದೆ ಇಂಪಾರ್ಟೆಂಟ್‌ ಟಿಪ್ಸ್‌

ಕಡಿಮೆ ದುಡ್ಡಿಗೆ ಸಿಕ್ತಿದೆ ಅಂತ ಚೀಪ್‌ ಕ್ವಾಲಿಟಿಯ ಪದಾರ್ಥಗಳನ್ನು ಕೊಳ್ಳಬೇಡಿ. ಅದು ಹಾಳಾದ್ರೆ ಇನ್ನೂ ಹೆಚ್ಚು ದುಡ್ಡು ಕೊಟ್ಟು ಮತ್ತೆ ಒಳ್ಳೆಯ ಬ್ರ್ಯಾಂಡ್‌ನ ವಸ್ತು ಖರೀದಿ ಮಾಡಬೇಕಾಗುತ್ತದೆ.

ಬಟ್ಟೆ ಖರೀದಿ ಮಾಡ್ತಾ ಇದ್ದರೆ ಬೇಸಿಕ್‌ ಬ್ಲ್ಯಾಕ್‌, ವೈಟ್‌, ಬೇಜ್‌, ಮರೂನ್‌ ಹಾಗೂ ಆಲಿವ್‌ ಗ್ರೀನ್‌ ಪ್ಲೇನ್‌ ಟಾಪ್ಸ್‌ ಖರೀದಿಸಿ. ಇವುಗಳನ್ನು ಯಾವುದಕ್ಕೆ ಬೇಕಾದ್ರೂ ಮಿಕ್ಸ್‌ & ಮ್ಯಾಚ್‌ ಮಾಡಿಕೊಳ್ಳಬಹುದು.

ಟ್ರೆಂಡ್‌ ಬಂದಾಗ ಶಾಪಿಂಗ್‌ ಮಾಡಬೇಡಿ. ಟ್ರೆಂಡ್‌ ಬಂತು ಎಂದು ದುಬಾರಿ ಡ್ರೆಸ್‌, ಸೀರೆ ಅಥವಾ ಯಾವುದಾದರೂ ಸಾಮಾಗ್ರಿ ಖರೀದಿ ಮಾಡಬಹುದು. ಆದರೆ ಟ್ರೆಂಡ್‌ ಹೋದ ನಂತರ ಆ ಬಟ್ಟೆ ಬೇಡವೇ ಬೇಡ ಎನಿಸುತ್ತದೆ.

ಆಫ್‌ಲೈನ್‌ಗಿಂತ ಆನ್‌ಲೈನ್‌ನಲ್ಲಿ ಹೆಚ್ಚು ಬೆನಿಫಿಟ್ಸ್‌ ಇದೆ. ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಜಾಗ್ರತೆ. ಬ್ರ್ಯಾಂಡೆಡ್‌ ಅಂಗಡಿಗಳಿಂದ ಮಾತ್ರ ಶಾಪಿಂಗ್‌ ಮಾಡಿ. ಬೇಡವಾದರೆ ರಿಟರ್ನ್‌ ಮಾಡಿ.

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಇಷ್ಟವಾದ ಒಂದು ಐಟಮ್‌ನ್ನು ಮೂರ್ನಾಲ್ಕು ಕಡೆ ಕಂಪೇರ್‌ ಮಾಡಿ. ಎಲ್ಲಿ ಹಣ ಕಡಿಮೆ ಇರುತ್ತದೋ ಆ ವೆಬ್‌ಸೈಟ್‌ನಿಂದ ಖರೀದಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !