ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿಂಗಳಿನಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸಂಸದ ಪ್ರಜ್ವ್ಲ್ ರೇವಣ್ಣ ಕಡೆಗೂ ಭಾರತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ತಡರಾತ್ರಿ ಎಸ್ಐಟಿ ಪ್ರಜ್ವಲ್ರನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ಗೃಹಸಚಿವ ಜಿ.ಪರಮೇಶ್ವರ್ ಮಾತನಾಡಿದ್ದಾರೆ.
ಸಂತ್ರಸ್ತೆಯರು ಪೊಲೀಸರು ಹಾಗೂ ಎಸ್ಐಟಿ ಮುಂದೆ ಬಂದು ದೈರ್ಯವಾಗಿ ಹೇಳಿಕೊಳ್ಳಬೇಕು. ಈ ಹಿಂದೆಯೇ ಅವರಿಗೆ ರಕ್ಷಣೆ ಕೊಡುವುದಾಗಿ ಹೇಳಿದ್ದೇವೆ, ಈಗಲೂ ಹೇಳ್ತೇವೆ ಬನ್ನಿ ಧೈರ್ಯವಾಗಿ ಮಾತನಾಡಿ ಎಂದಿದ್ದಾರೆ.
ಅಧಿಕಾರಿಗಳು ಅವರ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅಧಿಕಾರಿಗಳಿಗೆ ಅವರು ಸಹಕಾರ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಸಹಜವಾಗಿಯೇ ಅವರು ತನಿಖೆಗೆ ಸಹಕಾರ ಕೊಡಬೇಕು ಎಂದಿದ್ದಾರೆ.