ನಮ್ಮ ಜೀವನದಲ್ಲಿ ಶಿಸ್ತು ಎಂಬುದು ಯಶಸ್ಸಿಗೆ ದಾರಿ ತೋರಿಸುವ ಪ್ರಮುಖ ಅಂಶ. ಶಿಸ್ತು ಅಂದ್ರೆ ಕಠಿಣ ನಿಯಮಗಳನ್ನು ಪಾಲಿಸೋದಲ್ಲ, ಬದಲಾಗಿ ದಿನನಿತ್ಯದ ಚಿಕ್ಕ ಚಿಕ್ಕ ಅಭ್ಯಾಸಗಳಿಂದ ಅದನ್ನು ರೂಢಿಸಿಕೊಳ್ಳೋದು. ವಿಶೇಷವಾಗಿ ಬೆಳಿಗ್ಗೆ ಮಾಡುವ ಕೆಲವು ಉತ್ತಮ ಅಭ್ಯಾಸಗಳು ದಿನವಿಡೀ ನಮ್ಮ ಮನಸ್ಸು, ದೇಹ ಹಾಗೂ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರುತ್ತೆ. ಇಲ್ಲಿದೆ ಸ್ವಯಂ-ಶಿಸ್ತನ್ನು ಬೆಳೆಸುವ ಬೆಳಗಿನ ಅಭ್ಯಾಸಗಳು.
- ಬೇಗ ಎದ್ದೇಳಿ: ಯಶಸ್ವಿ ವ್ಯಕ್ತಿಗಳು ಜೀವನದಲ್ಲಿ ಬೇಗನೆ ಎದ್ದೇಳುವುದು ಸಾಮಾನ್ಯ. ದಿನವನ್ನು ಬೇಗ ಪ್ರಾರಂಭಿಸುವುದು ಗಮನವನ್ನು ಕೇಂದ್ರೀಕರಿಸಲು ಸಹಾಯಮಾಡುತ್ತದೆ ಮತ್ತು ಗುರಿ ಸಾಧನೆಗೆ ಒತ್ತು ನೀಡುತ್ತದೆ.
- ದಿನದ ಪ್ಲ್ಯಾನ್ ಮಾಡಿಕೊಳ್ಳಿ: ಬೆಳಿಗ್ಗೆ ಕೆಲವು ನಿಮಿಷಗಳನ್ನು ತೆಗೆದುಕೊಂಡು ದಿನದ ಕಾರ್ಯಗಳನ್ನು ಬರೆಯುವುದು ಶಿಸ್ತನ್ನು ಬೆಳೆಸುವ ಸರಳ ಮಾರ್ಗ. ಇದು ಸಮಯ ನಿರ್ವಹಣೆಯ ಜೊತೆಗೆ ಕಾರ್ಯಗಳನ್ನು ಆದ್ಯತೆಯಂತೆ ಮಾಡಲು ಸಹಕಾರಿಯಾಗಿದೆ.
- ಆರೋಗ್ಯಕರ ಉಪಹಾರ ಸೇವಿಸಿ: ಉಪಹಾರವನ್ನು ದಿನದ ಅತ್ಯಂತ ಮುಖ್ಯ ಊಟವೆಂದು ಕರೆಯುತ್ತಾರೆ. ಪೌಷ್ಟಿಕಾಂಶಯುತ ಹಾಗೂ ಸಮತೋಲಿತ ಉಪಹಾರವು ಶಕ್ತಿ ತುಂಬಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
- ವ್ಯಾಯಾಮ ಮಾಡಿ: ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ದೇಹ ಚುರುಕಾಗುತ್ತದೆ ಮತ್ತು ಮನಸ್ಸು ತಾಜಾ ಆಗುತ್ತದೆ. ಇದು ಶಿಸ್ತಿನ ರೂಢಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ ಸಹಕಾರಿಯಾಗಿದೆ.
- Mindfulness ಅಭ್ಯಾಸ ಮಾಡಿ: ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ ಕೆಲವೇ ನಿಮಿಷಗಳ ಧ್ಯಾನ ಮಾಡುವುದರಿಂದ ಮನಸ್ಸು ನಿಯಂತ್ರಣದಲ್ಲಿ ಇರುತ್ತದೆ. ಇದು ದಿನವಿಡೀ ಸಮತೋಲನ ಕಾಪಾಡಲು ಸಹಾಯಮಾಡುತ್ತದೆ.
- ಕೃತಜ್ಞತೆ ಬೆಳೆಸಿಕೊಳ್ಳಿ: ಬೆಳಿಗ್ಗೆ ಕೃತಜ್ಞತೆಯ ಮನೋಭಾವದಿಂದ ಪ್ರಾರಂಭಿಸುವುದು ದಿನವಿಡೀ ಸಕಾರಾತ್ಮಕ ಮನೋಸ್ಥಿತಿಯನ್ನು ನೀಡುತ್ತದೆ. ಇದು ಶಿಸ್ತಿನೊಂದಿಗೆ ತೃಪ್ತಿಯ ಭಾವನೆಯನ್ನು ಹೆಚ್ಚಿಸುತ್ತದೆ.