ಇಂದಿನ ತಂತ್ರಜ್ಞಾನ ಯುಗದಲ್ಲಿ ಸಂಸ್ಕರಿತ ಆಹಾರ ಸೇವನೆಯು ಹೆಚ್ಚಾದಂತೆ, ಸಕ್ಕರೆಯ ಸೇವನೆಯೂ ಏರಿಕೆಯಾಗಿದೆ. ಹೆಚ್ಚು ಸಕ್ಕರೆ ಸೇವನೆಯು ಹೃದಯರೋಗ, ಮಧುಮೇಹ, ತೂಕ ಹೆಚ್ಚಳ, ಚರ್ಮದ ಸಮಸ್ಯೆ ಮತ್ತು ಎನರ್ಜಿ ಕೊರತೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಸಕ್ಕರೆಯನ್ನು ನಿಲ್ಲಿಸಲು ಇಚ್ಛಿಸುವವರು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು.
ಸಕ್ಕರೆ ಎಲ್ಲೆಲ್ಲಿದೆ ಎಂಬುದನ್ನು ಅರಿಯಬೇಕು:
ಹಣ್ಣಿನಲ್ಲಿ ಇರುವ ನೈಸರ್ಗಿಕ ಸಕ್ಕರೆಯಿಂದ ಹಿಡಿದು, ಪಾಕವಿಧಾನಗಳಲ್ಲಿ ಬಳಸುವ ಸಕ್ಕರೆಯವರೆಗೆ—ಅದು ವಿವಿಧ ರೂಪದಲ್ಲಿ ಇದ್ದು, ಪ್ಯಾಕೆಜ್ ಫುಡ್‌ಗಳಲ್ಲಿ ಸಹ ಅಡಗಿರುತ್ತದೆ. ಯಾವ ಆಹಾರದಲ್ಲಿ ಎಷ್ಟು ಸಕ್ಕರೆ ಇದೆ ಎಂಬುದನ್ನು ಪ್ಯಾಕ್ ನೋಡಿ ಅರಿಯುವುದು ಮುಖ್ಯ.
ಸಕ್ಕರೆ ತಿನ್ನೋದು ನಿಲ್ಲಿಸಿದಾಗ ಈ ಲಕ್ಷಣಗಳು ಕಾಣಬಹುದು:
ಸಕ್ಕರೆ ನಿಲ್ಲಿಸಿದಾಗ ಕೆಲವು ದಿನಗಳವರೆಗೆ ತಲೆನೋವು, ನಿದ್ದೆ ಕೊರತೆ, ಕಿರಿಕಿರಿ ಸ್ವಭಾವ ಇತ್ಯಾದಿ ಆಗಬಹುದು. ಆದರೆ ಇದು ತಾತ್ಕಾಲಿಕ, ಶರೀರ ಇತರ ಅಂಶಗಳಿಗೆ ಹೊಂದಿಕೊಂಡು ಸಕ್ಕರೆಯ ಅಂಶ ಮರೆತು ಹೋಗುತ್ತದೆ.
ಪರ್ಯಾಯ ಆಹಾರ ಆಯ್ಕೆಮಾಡಿ:
ಸಕ್ಕರೆಯ ಬದಲು ಹಣ್ಣಿನ ಸಿಹಿ, ಬೆಲ್ಲ, ಖರ್ಜುರ, ಮೇಪಲ್ ಸಿರಪ್ ಅಥವಾ ಹನಿ ಮೇಪಲ್ ಸಿರಪ್ ಬಳಸಬಹುದು. ಇವು ನೈಸರ್ಗಿಕವಾಗಿದ್ದು ಆರೋಗ್ಯಕ್ಕೂ ಹಾನಿಕಾರಕವಲ್ಲ.
ಪ್ರೋಟೀನ್ ಮತ್ತು ಫೈಬರ್ ಆಧಾರಿತ ಆಹಾರ ಸೇವಿಸಿ:
ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಇರುವ ಆಹಾರಗಳು ಶರೀರಕ್ಕೆ ತಕ್ಷಣ ಎನರ್ಜಿ ನೀಡುತ್ತವೆ ಮತ್ತು ಸಿಹಿ ತಿನ್ನಬೇಕೆಂಬ ಕ್ರೇವಿಂಗ್ ಅನ್ನು ಕಡಿಮೆ ಮಾಡುತ್ತವೆ.
ಮನಸ್ಸು ಮತ್ತು ನಿಯಮಾನುಸಾರತೆ ಮುಖ್ಯ:
ಸಕ್ಕರೆ ನಿಲ್ಲಿಸುವ ನಿರ್ಧಾರವನ್ನು ಮಾನಸಿಕವಾಗಿ ಬಲವಾಗಿ ತೆಗೆದುಕೊಳ್ಳಬೇಕು. ಮೊದಲಿನ ದಿನಗಳಲ್ಲಿ ಕಷ್ಟವಾಗಬಹುದು ಆದರೆ ನಿರಂತರ ಪ್ರಯತ್ನದಿಂದ ಅದು ಸಾಧ್ಯ.
ಸಕ್ಕರೆ ನಿಲ್ಲಿಸುವುದು ಆರೋಗ್ಯದ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ. ಈ ಸರಳ ಸಂಗತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕ್ರಮವಾಗಿ ನಿಮ್ಮ ಆಹಾರದಲ್ಲಿ ಬದಲಾವಣೆ ತನ್ನಿ, ನಿಮ್ಮ ದೇಹ ನಿಮಗೆ ಧನ್ಯವಾದ ಹೇಳುವುದು ಖಂಡಿತ.