ಸಂಜೆ ಚಹಾ ಸಮಯದಲ್ಲಿ, ಎಲ್ಲರಿಗೂ ಬಿಸಿ ಬಿಸಿ ಸಮೋಸಾ ನೆನಪಾಗುತ್ತೆ. ಅದರಲ್ಲೂ ಈರುಳ್ಳಿ ಸಮೋಸಾ (Onion Samosa) ಹಸಿ ಮೆಣಸಿನಕಾಯಿ, ಈರುಳ್ಳಿ ಹಾಗೂ ಮಸಾಲಾದ ಹುರಿದ ರುಚಿಯ ಮಿಶ್ರಣದಿಂದ ತುಂಬಿದ ಈ ತಿಂಡಿ ಎಲ್ಲರಿಗೂ ಅಚ್ಚುಮೆಚ್ಚು.
ಬೇಕಾಗುವ ಪದಾರ್ಥಗಳು:
ಎಣ್ಣೆ ಕರಿಯಲು
1 ಕಪ್ ಗೋಧಿ ಹಿಟ್ಟು
1 ಕಪ್ ಮೈದಾ
ರುಚಿಗೆ ತಕ್ಕಷ್ಟು ಉಪ್ಪು
ಓಂಕಾಳು
1 ಚಮಚ ಎಣ್ಣೆ – ಹಿಟ್ಟಿಗೆ ಸೇರಿಸಿಕೊಳ್ಳಲು
1 ಚಮಚ ನೀರು
ಮಸಾಲಾ ಮಾಡಲು ಬೇಕಾಗುವ ಸಾಮಗ್ರಿಗಳು
1 ಕಪ್ ನುಣ್ಣಗೆ ಕತ್ತರಿಸಿದ ಈರುಳ್ಳಿ
3/4 ಕಪ್ ಅವಲಕ್ಕಿ
ಚಾಟ್ ಮಸಾಲಾ – 1 ಟೀಚಮಚ
ಆಮ್ಚೂರ್ ಪುಡಿ (ಒಣ ಮಾವಿನ ಪುಡಿ) – 1/2 ಟೀಚಮಚ
ರುಚಿಗೆ ತಕ್ಕಷ್ಟು ಉಪ್ಪು
ಹಸಿರು ಮೆಣಸಿನಕಾಯಿಗಳು – ನುಣ್ಣಗೆ ಕತ್ತರಿಸಿದ
ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಗೋಧಿ ಹಿಟ್ಟು, ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಓಂಕಾಳು ಹಾಕಿ ಚನ್ನಾಗಿ ಬೆರೆಸಿ ಬೇಕಾದಷ್ಟು ನೀರು ಹಾಕಿ ಗಟ್ಟಿಯಾದ ಹಿಟ್ಟನ್ನು ತಯಾರಿಸಿ. ಈಗ ಅದನ್ನು ಮುಚ್ಚಿ ಅರ್ಧ ಗಂಟೆ ಬಿಡಿ. ನಂತರ ಚಪಾತಿ ಉಂಡೆಗಳನ್ನು ತೆಗೆದುಕೊಂಡು ತೆಳುವಾಗಿ ಲಟ್ಟಿಸಿ ಚಪಾತಿ ತಯಾರಿಸಿ ಬಿಸಿ ತವಾದ ಮೇಲೆ ಹಾಕಿ. ಸ್ವಲ್ಪವೇ ಬಿಸಿಮಾಡಿಕೊಳ್ಳಿ.
ಮಸಾಲಾ ಮಾಡಲು: ಪಾನ್ ಗೆ ಎಣ್ಣೆ ಹಾಕಿ ಮೇಲೆ ತಿಳಿಸಲಾದ ಎಲ್ಲಾ ಪದಾರ್ಥಗಳ ಹಾಕಿ ಈರುಳ್ಳಿ ಜೊತೆ ಫ್ರೈ ಮಾಡಿಕೊಳ್ಳಿ. ಜೊತೆಗೆ ತೊಳೆದ ಅವಲಕ್ಕಿಯನ್ನು ಹಾಕಿ. ಯಾವುದೇ ನೀರನ್ನು ಸೇರಿಸಬೇಡಿ
ಈಗ ಚಪಾತಿ ಹಾಳೆಯನ್ನು 3-4 ಉದ್ದದ ಪಟ್ಟಿಗಳಾಗಿ ಕತ್ತರಿಸಿ. ಈಗ ಒಂದು ತುದಿಯಲ್ಲಿ ಹೂರಣವನ್ನು ಸೇರಿಸಿ ಮತ್ತು ಅವುಗಳನ್ನು ತ್ರಿಕೋನ ಸಮೋಸಾ ಆಕಾರದಂತೆ ಮಡಚಿ. ನೀರಿನೊಂದಿಗೆ ಸ್ವಲ್ಪ ಮೈದಾ ಹಿಟ್ಟನ್ನು ಬೆರೆಸಿ ಮತ್ತು ತಯಾರಿಸಿದ ಸಮೋಸಾಗಳ ತುದಿಗಳನ್ನು ಅಂಟಿಸಲು ಅಂಟು ತಯಾರಿಸಿ.
ಈಗ ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಈ ಸಮೋಸಾಗಳನ್ನು ಡೀಪ್ ಫ್ರೈ ಮಾಡಿದರೆ ಈರುಳ್ಳಿ ಸಮೋಸ ರೆಡಿ.