Chamomile ಹರ್ಬಲ್ ಟೀ. ಇದು ಆಯುರ್ವೇದ ಮತ್ತು ಪ್ರಾಚೀನ ವೈದ್ಯಕೀಯದಲ್ಲಿ ಬಳಸಲ್ಪಡುತ್ತಿದ್ದು, ದೇಹ-ಮನಸ್ಸಿಗೆ ಬಹುಮಟ್ಟಿಗೆ ಪ್ರಯೋಜನ ನೀಡುತ್ತದೆ. ಇದನ್ನು ಕೇವಲ ನಿದ್ರೆ ಚನ್ನಾಗಿ ಬರುವುದಕ್ಕೆ ಮಾತ್ರ ಬಳಸುವುದಲ್ಲ, ಇದು ದೇಹದ ಆರೋಗ್ಯದ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ.
ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ (Helps Improve Sleep)
Chamomile ಟೀ ರಾತ್ರಿ ಕುಡಿಯುವುದರಿಂದ ಮಾನಸಿಕ ಶಾಂತಿ ಒದಗಿಸಿ ಉತ್ತಮ ನಿದ್ರೆಗೆ ನೆರವಾಗುತ್ತದೆ. ಇದರಲ್ಲಿ ಅಪಿಜೆನಿನ್ (Apigenin) ಎನ್ನುವ ನ್ಯಾಚುರಲ್ ಅಂಶವಿದೆ, ಇದು ಮೆದುಳಿನ ರಿಸೆಪ್ಟರ್‌ಗಳ ಮೇಲೆ ಪರಿಣಾಮ ಬೀರಿ ಶಾಂತಿಸುಧಾರಣೆಗೆ ಸಹಕಾರಿಯಾಗುತ್ತದೆ.
ದೈಹಿಕ ಒತ್ತಡ ಮತ್ತು ಕಳವಳವನ್ನು ಕಡಿಮೆ ಮಾಡುತ್ತದೆ(Reduces Stress and Anxiety)
Chamomile ಟೀ ಮಾನಸಿಕ ಒತ್ತಡ, ಆತಂಕ ಮತ್ತು ಕಳವಳವನ್ನು ಕಡಿಮೆ ಮಾಡುತ್ತದೆ. ಇದರ ಶಾಂತಿಗೊಳಿಸುವ ಗುಣಧರ್ಮಗಳು ನರಜಾಲದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ, ಇದು ರಿಲ್ಯಾಕ್ಸೇಶನ್‌ಗಾಗಿ ಅತ್ಯುತ್ತಮವಾದ ಆಯ್ಕೆಯಾಗಿದೆ.
ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ( Boosts Digestion)
ಅಜೀರ್ಣ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಸಮಸ್ಯೆಗಳಿಗೆ Chamomile ಅತ್ಯುತ್ತಮ. ಇದು ಜೀರ್ಣಕ್ರಿಯೆ ಸುಲಭಗೊಳಿಸಲು ಸಹಾಯ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಉಪಕಾರಿ( Good for Skin Health)
Chamomileನ ಆಂಟಿ-ಇನ್ಫ್ಲಮೇಟರಿ (Anti-inflammatory) ಮತ್ತು ಆಂಟಿ-ಆಕ್ಸಿಡೆಂಟು ಗುಣಗಳು ಚರ್ಮದ ಅಲರ್ಜಿ, ರೆಡ್ನೆಸ್, ಸನ್‌ಬರ್ನ್, ಕಡಿಮೆ ಮಾಡುತ್ತದೆ. Chamomile ಎಕ್ಸ್ಟ್ರಾಕ್ಟ್ ಬಳಸಿದ ಕ್ರೀಮ್‌ಗಳು ಚರ್ಮದ ತಾಜಾತನವನ್ನು ಇಟ್ಟುಕೊಳ್ಳಲು ಸಹಾಯ ಮಾಡುತ್ತವೆ.
ಇಮ್ಯುನಿಟಿ ಬೂಸ್ಟ್ ಮಾಡುತ್ತದೆ (Strengthens Immunity)
Chamomile ಟೀ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಮಾಡುತ್ತದೆ. ಚಳಿಗಾಲದ ಜ್ವರ, ಕೆಮ್ಮು, ಗಂಟಲು ನೋವುಗಳಿಂದ ದೂರವಿರಲು ಸಹಾಯವಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ದೇಹ ಹೈಡ್ರೇಟ್ ಆಗಿ ಇಮ್ಯೂನ್ ಸಿಸ್ಟಂ ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುತ್ತದೆ.
Chamomile ಸರಳವಾದ ಹೂವಿನಂತೆ ತೋರುವ ಸಸ್ಯವಾದರೂ ಅದರಲ್ಲಿ ಅಸಾಧಾರಣ ಆರೋಗ್ಯ ಲಾಭಗಳಿವೆ. ದಿನಚರಿಯಲ್ಲಿ Chamomile ಟೀ ಅಥವಾ ಇತರ ರೂಪಗಳಲ್ಲಿ ಇದರ ಬಳಕೆ ನಿಮ್ಮ ದೇಹ ಮತ್ತು ಮನಸ್ಸಿಗೆ ಶಾಂತಿ ಮತ್ತು ಆರೋಗ್ಯವನ್ನು ನೀಡಬಹುದು. ಈ ಟೀ ಅನ್ನು ಒಂದು ಕಪ್ ನೆಮ್ಮದಿ ಎಂದೂ ಹೇಳಬಹುದು.