ಆರೋಗ್ಯಕರ ಆಹಾರವನ್ನು ತಿನ್ನಲು ಬಯಸುವವರ ಪಟ್ಟಿಯಲ್ಲಿ ಸ್ಪ್ರೌಟ್ಸ್ (ಮೊಳಕೆ ಧಾನ್ಯಗಳು) ಸದಾ ಮೊದಲ ಸ್ಥಾನದಲ್ಲಿರುತ್ತವೆ. ಮೊಳಕೆ ಧಾನ್ಯಗಳಲ್ಲಿ ಪ್ರೋಟೀನ್, ವಿಟಮಿನ್, ಕಬ್ಬಿಣ ಮತ್ತು ಫೈಬರ್ ಹೆಚ್ಚು ಇರುವುದರಿಂದ ದೇಹಕ್ಕೆ ಶಕ್ತಿಯ ಜೊತೆಗೆ ರೋಗ ನಿರೋಧಕ ಶಕ್ತಿ ನೀಡುತ್ತದೆ. ಸಾಮಾನ್ಯವಾಗಿ ನಾವು ಮೊಳಕೆಗಳನ್ನು ಸಲಾಡ್ ಆಗಿ ತಿನ್ನುತ್ತೇವೆ. ಆದರೆ ಅದನ್ನು ಸ್ವಲ್ಪ ವಿಭಿನ್ನವಾಗಿ ಸ್ಪ್ರೌಟ್ ರೈಸ್ ಆಗಿ ಮಾಡಿದರೆ ರುಚಿಯೂ ಹೆಚ್ಚುತ್ತದೆ, ಆರೋಗ್ಯವೂ ಹೆಚ್ಚುತ್ತದೆ.
ಬೇಕಾಗುವ ಸಾಮಗ್ರಿಗಳು
ಅನ್ನ – 1 ಕಪ್
ಮೊಳಕೆ ಹುರಳಿಕಾಳು ಅಥವಾ ಹೆಸರುಕಾಳು – 1 ಕಪ್
ಈರುಳ್ಳಿ – 1
ಟೊಮ್ಯಾಟೊ – 1
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕರಿಬೇವು – ಕೆಲವು
ಎಣ್ಣೆ – 2 ಟೇಬಲ್‌ಸ್ಪೂನ್
ಜೀರಿಗೆ – 1/2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ತಯಾರಿಸುವ ವಿಧಾನ
ಮೊದಲು ಅಕ್ಕಿಯನ್ನು ಬೇಯಿಸಿ ಬದಿಗಿಡಿ. ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಕರಿಬೇವು, ಈರುಳ್ಳಿ ಹಾಕಿ ಹುರಿಯಿರಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸು ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಟೊಮ್ಯಾಟೊ ಹಾಕಿ ಮೃದುವಾಗುವವರೆಗೂ ಬೇಯಿಸಿ.
ಈಗ ಇದಕ್ಕೆ ಮೊಳಕೆಗಳನ್ನು ಸೇರಿಸಿ ಸ್ವಲ್ಪ ಬೇಯಿಸಿ. ಕೊನೆಯಲ್ಲಿ ಅನ್ನ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಬಿಸಿಯಾಗಿ ಸವಿಯಿರಿ.