‘ವಾರವಿಡೀ ಕಾಂತಾರ ಹ್ಯಾಂಗ್ ಓವರ್‌ನಲ್ಲಿರುತ್ತೇನೆ, ಎಂಥಾ ಸಿನಿಮಾ ಹ್ಯಾಟ್ಸ್‌ಆಫ್’

ಹೊಸದಿಗಂತ ಡಜಿಟಲ್ ಡೆಸ್ಕ್:

ಕಾಂತಾರ ನೋಡಿ ಹೊಗಳದವರಿಲ್ಲ ಎನ್ನುವ ಮಟ್ಟಿಗೆ ಸಿನಿಮಾ ಯಶಸ್ಸು ಸಾಧಿಸಿದೆ. ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೂ ಕಾಂತಾರ ಕಂಪು ಹರಡಿದೆ.
ಸದಾ ಟೀಕೆ, ವಿಮರ್ಶೆಗಳಿಗೆ ಹೆಸರಾಗಿರುವ ಕಂಗನಾ ರನೌತ್ ಕಾಂತಾರ ನೋಡಿ ಫಿದಾ ಆಗಿದ್ದಾರೆ. ಈ ಹಿಂದೆ ಕಾಂತಾರ ಬಗ್ಗೆ ಸಾಕಷ್ಟು ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ ಸಿನಿಮಾ ನೋಡಬೇಕು ಎಂದು ಕಂಗನಾ ಹೇಳಿಕೊಂಡಿದ್ದರು.

Kangana Ranaut to play Bengali theatre superstar Noti Binodini in Pradeep  Sarkar directorial : Bollywood News - Bollywood Hungamaಕುಟುಂಬದ ಜೊತೆ ಸಿನಿಮಾ ನೋಡಿ ಬಂದೆ. ನನಗೆ ಇನ್ನೂ ಸಿನಿಮಾದಿಂದ ಹೊರಬರೋಕೆ ಆಗಿಲ್ಲ, ಕೈ ನಡುಗುತ್ತಿದೆ. ರಿಷಭ್ ಶೆಟ್ಟಿ ಹ್ಯಾಟ್ಸ್‌ಆಫ್ ಇಂಥ ಸಿನಿಮಾ ಮಾಡಿದ್ದಕ್ಕೆ. ಕಥೆ, ನಿರ್ದೇಶನ, ಫೈಟ್, ಸಿನಿಮಾಟೊಗ್ರಫಿ, ಆಕ್ಟಿಂಗ್ ಬ್ರಿಲಿಯಂಟ್ ಆಗಿದೆ. ಸಂಪ್ರದಾಯ, ಜಾನಪದವನ್ನು ಎಷ್ಟು ಚೊಕ್ಕವಾಗಿ ಸೇರಿಸಿದ್ದೀರಿ, ಸಿನಿಮಾ ಎಂದರೆ ಹೀಗಿರಬೇಕು. ಸಿನಿಮಾ ಮುಗಿದ ಮೇಲೆ ಅಲ್ಲಿ ಜನ ನಿಂತು ಮಾತನಾಡುತ್ತಿದ್ದರು. ಈ ರೀತಿ ಸಿನಿಮಾ ಹಿಂದೆಲ್ಲೂ ನೋಡಿಲ್ಲ ಎಂದು. ಧನ್ಯವಾದಗಳು, ನನಗೆ ಹ್ಯಾಂಗ್‌ಓವರ್‌ನಿಂದ ಹೊರಬರೋಕೆ ಒಂದು ವಾರವಾದರೂ ಬೇಕು ಎಂದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!