ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳನ್ನು ನಾನು ನೋಡಿಕೊಳ್ತೇನೆ. ನೀನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡಿಸ್ತೇನೆ ಎಂದು ಪತಿರಾಯನೇ ಪತಿಗೆ ಹೇಳಿದ್ದಾನೆ.
ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಬೇರೊಬ್ಬನ ಜತೆ ಸಂಬಂಧವಿರುವುದನ್ನು ಅರಿತು ಆಕೆಯನ್ನು ಇಷ್ಟಪಟ್ಟವನೊಂದಿಗೆ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾನೆ. ಬಬ್ಲೂ ಎಂಬ ವ್ಯಕ್ತಿ ತನ್ನ ಇಬ್ಬರು ಮಕ್ಕಳನ್ನು ತಾನು ನೋಡಿಕೊಳ್ಳುವುದಾಗಿ ಹೇಳಿದನು. ಹೆಂಡತಿ ಆ ಬೇಡಿಕೆಯನ್ನು ಒಪ್ಪಿಕೊಂಡಳು.
ಬಬ್ಲೂ ಮತ್ತೆ ರಾಧಿಕಾ 2017ರಲ್ಲಿ ವಿವಾಹವಾಗಿದ್ದರು ಅವರಿಗೆ 7 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಜೀವನೋಪಾಯಕ್ಕಾಗಿ ಬಬ್ಲೂ ಆಗಾಗ ಮನೆಯಿಂದ ಬೇರೆ ಊರಿಗೆ ಹೋಗುತ್ತಿದ್ದ. ರಾಧಿಕಾ ಹಳ್ಳಿಯ ಯುವಕನೊಬ್ಬನನ್ನು ಇಷ್ಟಪಡಲು ಶುರು ಮಾಡಿದ್ದಳು.
ಈ ವಿಚಾರ ಬಬ್ಲೂ ಕುಟುಂಬದಿಂದ ತಿಳಿದಿತ್ತು. ನಂತರ ಸಮಸ್ಯೆಯನ್ನು ಬಗೆಹರಿಸಲು ಬಬ್ಲು ನಿರ್ಧಾರ ಮಾಡಿ ತನ್ನ ಪತ್ನಿಯನ್ನು ಆತನಿಗೆ ಬಿಟ್ಟುಕೊಡಲು ಮುಂದಾಗಿದ್ದ. ನ್ಯಾಯಾಲಯಕ್ಕೆ ಹೋಗಿ ಪತ್ನಿ ಹಾಗೂ ಆ ವ್ಯಕ್ತಿಯ ಜತೆ ವಿವಾಹಕ್ಕೆ ಸಾಕ್ಷಿಯಾದ. ನಂತರ ಅವರನ್ನು ದೇವಸ್ಥಾನಕ್ಕೆ ಕರೆದೊಯ್ದು ಅಲ್ಲಿಅವರು ಹೂಮಾಲೆ ಧರಿಸಿ ವಿವಾಹ ಪ್ರತಿಜ್ಞೆ ಮಾಡಿದ್ದಾರೆ.
This is anytime a better option than committing suicide or getting murdered. A man from Sant Kabir Nagar in UP got his wife married to her lover after he found them in a compromising situation. pic.twitter.com/vpUvuYMo5b
— NCMIndia Council For Men Affairs (@NCMIndiaa) March 26, 2025