ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯದ ಕಣ್ಣೂರಿನಲ್ಲಿರುವ ನೌಕಾ ಅಕಾಡೆಮಿ ಆವರಣಕ್ಕೆ ಜಮ್ಮು ಕಾಶ್ಮೀರ ಮೂಲದ ಆಗಂತುಕನೋರ್ವ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದು, ಮಿಂಚಿನ ಕಾರ್ಯಾಚರಣೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಕಣ್ಣೂರಿನ ಎಜಿಮಲದಲ್ಲಿರುವ ಈ ಅಕಾಡೆಮಿಯಲ್ಲಿ ವ್ಯಕ್ತಿ ಅಚಾನಕ್ ಆಗಿ ಅಕ್ರಮ ಪ್ರವೇಶಕ್ಕೆ ಯತ್ನಿಸಿದ್ದಾನೆ. ಇದೀಗ ಪಯ್ಯನ್ನೂರು ಪೋಲೀಸರ ವಶದಲ್ಲಿರುವ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.