ಅರಣ್ಯ ಪ್ರದೇಶದಲ್ಲಿ ಅಕ್ರಮ ನಿರ್ಮಾಣ ಕಾಮಗಾರಿ: ವಾಯುಪಡೆಯಿಂದ ಮರುವಶಕ್ಕೆ ಈಶ್ವರ್‌ ಖಂಡ್ರೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಪೀಣ್ಯ ಪ್ಲಾಂಟೇಷನ್‌ ಮತ್ತು ಜಾರಕಬಂಡೆ ಕಾವಲು ಪ್ರದೇಶದಲ್ಲಿ ವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿಯನ್ನು ಮರುವಶಕ್ಕೆ ಪಡೆಯಲು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

1987ರಲ್ಲಿ ಪೀಣ್ಯ ಪ್ಲಾಂಟೇಷನ್‌ ಮತ್ತು ಜಾರಕಬಂಡೆ ಕಾವಲು ಪ್ರದೇಶಕ್ಕೆ ಸೇರಿದ 570 ಎಕರೆ ಭೂಮಿ ಪೈಕಿ 452 ಎಕರೆ ಭೂಮಿಯನ್ನು ವಾಯಪಡೆಗೆ ಮಂಜೂರು ಮಾಡಿ ಅಧಿಸೂಚನೆ ಪ್ರಕಟಿಸಲಾಗಿತ್ತು. 2017ರಲ್ಲಿ ಈ ಅಧಿಸೂಚನೆ ರದ್ದುಗೊಳಿಸಿದೆ. ಆದರೂ, ಭಾರತೀಯ ವಾಯುಪಡೆ ಮಾ.1ರಂದು ಅಕ್ರಮವಾಗಿ ನಿರ್ಮಾಣ ಕಾಮಗಾರಿ ಆರಂಭಿಸಿದೆ.

ಸದ್ಯ ಇರುವ 444 ಎಕರೆ ಭೂಮಿಯಲ್ಲಿ 15 ಎಕರೆ ಪ್ರದೇಶದಲ್ಲಿ ಶೂಟಿಂಗ್‌ ರೇಂಜ್‌ ನಿರ್ಮಿಸಿಕೊಂಡಿದ್ದು, ಸ್ವಲ್ಪ ಭೂಮಿಯಲ್ಲಿ ವಾಯುಪಡೆ ಕಚೇರಿ ನಿರ್ಮಿಸಿದೆ. ಉಳಿದ ಭೂಮಿ ಅರಣ್ಯ ಸ್ವರೂಪದಲ್ಲೇ ಇದೆ. ಹೀಗಾಗಿ ಅರಣ್ಯ ಸ್ವರೂಪದ ಭೂಮಿಯನ್ನು ಕೂಡಲೇ ಕಾನೂನಾತ್ಮಕವಾಗಿ ವಶಕ್ಕೆ ಪಡೆಯಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!