Sunday, January 11, 2026

ಪುತ್ತೂರು ಸರ್ವೆ ಗಡಿಪಿಲದಲ್ಲಿ ಅಕ್ರಮ ಗೋ ಸಾಗಾಟ : ಗೋವುಗಳನ್ನು ರಸ್ತೆ ಬದಿ ಬಿಟ್ಟು ಪರಾರಿ

ಹೊಸದಿಗಂತ ವರದಿ ಪುತ್ತೂರು:

ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಸರ್ವೆ ಸಮೀಪದ ಗಡಿಪಿಲ ಎಂಬಲ್ಲಿ ಇಂದು ಮುಂಜಾನೆ ಅಕ್ರಮ ಗೋಸಾಗಾಟ ನಡೆದಿದ್ದು ಗೋ ಕಳ್ಳರು ಅವರ ಗೋ ಸಾಗಾಟದ ವಾಹನ ಹಾಳಾದುದರಿಂದ ಗೋವುಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾದ ಶಂಕೆ ವ್ಯಕ್ತವಾಗಿದ್ದು ಸ್ಥಳದಲ್ಲಿ 5 ಗೋವುಗಳು ಪತ್ತೆಯಾಗಿವೆ.

ತಕ್ಷಣ ಕಾರ್ಯಪ್ರವೃತರಾದ ಸ್ಥಳೀಯ ವಿಶ್ವ ಹಿಂದೂ ಪರಿಷದ್‌ ಬಜರಂಗದಳದ ಕಾರ್ಯಕರ್ತರು ಮತ್ತು ಸ್ಥಳೀಯರು ಪುತ್ತೂರು ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಜತೆ ಸೇರಿ ಗೋವುಗಳನ್ನು ಸುರಕ್ಷಿತವಾಗಿ ಪುತ್ತೂರು ನಗರ ಫೋಲಿಸ್ ಠಾಣೆಗೆ ಸಾಗಿಸಿ ರಕ್ಷಿಸಲಾಗಿದೆ.

ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಕಾರ್ಯಕರ್ತರ ಸಹಕಾರದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಗೋಶಾಲೆಯಿಂದ ಗೋವುಗಳಿಗೆ ಬೈಹುಲ್ಲು ವ್ಯವಸ್ಥೆ ಮಾಡಲಾಗಿದೆ.

ಈ ಅಕ್ರಮ ಗೋಸಾಗಾಟವನ್ನು ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಉಗ್ರವಾಗಿ ಖಂಡಿಸಿದೆ ಹಾಗೂ ತಕ್ಷಣ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಆಗ್ರಹಿಸಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!