October 17, 2026
Saturday, October 17, 2026
spot_img

ಅಭುದಾಬಿಯಿಂದ ಬೆಂಗಳೂರಿಗೆ ಬಂದ ಕನ್ನಡಿಗರು, 500 ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಸ್ರೇಲ್‌-ಇರಾನ್‌ ಯುದ್ಧದಿಂದಾಗಿ ರದ್ದಾಗಿದ್ದ ವಿಮಾನಯಾನ ಸೇವೆ ಮತ್ತೆ ಆರಂಭವಾಗಿದೆ. ನೂರಾರು ಕನ್ನಡಿಗರು ಇದೀಗ ತಾಯ್ನಾಡಿಗೆ ಮರಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಅಬುಧಾಬಿಯಿಂದ ಬೆಂಗಳೂರಿಗೆ ಬಂದ 2 ವಿಮಾನಗಳಲ್ಲಿ ಹಂತ ಹಂತವಾಗಿ 500 ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಸೋಮವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಅಭುದಾಬಿಯಿಂದ ವಿಮಾನ ಹೊರಟಿದ್ದು, ಇಂದು ಬೆಳಗಿನ ಜಾವಕ್ಕೆ ವಿಮಾನ ಬೆಂಗಳೂರಿಗೆ ಬಂದಿದೆ. ಅಲ್ಲದೇ ದುಬೈನಲ್ಲಿ ಸಿಲುಕಿದ್ದ ಒಲಿಂಪಿಕ್ಸ್‌ ಪದಕ ವಿಜೇತೆ, ಭಾರತೀಯ ಬ್ಯಾಡ್ಮಿಂಟನ್‌ ತಾರೆ ಪಿ.ವಿ ಸಿಂಧು ಕೂಡ ದುಬೈನಿಂದ ಬೆಂಗಳೂರಿಗೆ ಸೇಫಾಗಿ ಮರಳಿದ್ದಾರೆ.

Must Read