ಹೊಸದಿಗಂತ ವರದಿ, ಹುಬ್ಬಳ್ಳಿ:
ಅಂಗನವಾಡಿಯಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸಬೇಕಾದ ಆಹಾರ ಪದಾರ್ಥಗಳ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ಕೊನೆಗೂ ನ್ಯಾಯಾಲಯಕ್ಕೆ ಆಗಮಿಸಿ ಶರಣಾಗಿದ್ದಾಳೆ.
ಪ್ರಕರಣ ಪ್ರಮುಖ ಆರೋಪಿ ಎನ್ನಲಾದ ಬೈತುಲ್ ಕಿಲ್ಲೆದಾರ ಶರಣಾಗಿದ್ದಾಳೆ. ನ್ಯಾಯಾಲಯ ೧೪ ದಿನದ ಕಾಲ (ಏ. ೨) ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯನ್ನು ಧಾರವಾಡ ಕಾರಾಗೃಹಕ್ಕೆ ಕರೆದ್ಯೊಯಲಾಯಿತು.
೧೫ ರಂದು ಇಲ್ಲಿಯ ಹಳೇ ಗಬ್ಬೂರಿನಲ್ಲಿರುವ ಗೋದಾಮವೊಂದರಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸಬೇಕಿದ್ದ ಪೌಷ್ಟಿಕ ಆಹಾರ ಪದಾರ್ಥಗಳ ಕಾಳಸಂತೆ ಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿ ಇಡಲಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ಸ್ಥಳದ ಮೇಲೆ ದಾಳಿ ನಡೆಸಿ, ಆಹಾರ ಪದಾರ್ಥ ವಶಕ್ಕೆ ಪಡೆದಿದ್ದರು.
ಬಳಿಕ ಕಸಬಾ ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ೩೨ ಕ್ಕೂ ಹೆಚ್ಚು ಜನರ ಬಂಽಸಲಾಗಿತ್ತು. ಆದರೆ ಮುಖ್ಯ ಆರೋಪಿ ತಲೆಮರಿಸಿಕೊಂಡಿದ್ದರು. ಹು-ಧಾ ಪೊಲೀಸರಿಗೆ ಈ ಪ್ರಕರಣ ತಲೆ ನೋವಾಗಿ ಪರಿಣಮಿಸಿತ್ತು. ಈಗ ಮುಖ್ಯ ಆರೋಪಿ ಸ್ವಂತ ನ್ಯಾಯಾಲಯಕ್ಕೆ ಆಗಮಿಸಿ ಶರಣಾಗಿದ್ದಾಳೆ.