ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದಲ್ಲಿ ಅಕ್ರಮ ಭೂ ಒತ್ತುವರಿ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಪ್ರಕರಣದಲ್ಲಿ ನಟ ಯಶ್ ಅವರ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಸೈಟ್‌ಗೆ ಹಾಕಿದ್ದ ಬೇಲಿಯನ್ನು ಕೋರ್ಟ್ ಆದೇಶವಿಲ್ಲದೆ ಕಿತ್ತುಹಾಕಲಾಗಿದೆ ಎಂದು ಆರೋಪಿಸಿ, ಸ್ಥಳದಲ್ಲೇ ವಿರೋಧ ವ್ಯಕ್ತಪಡಿಸಿದರು.
ಆರು ವರ್ಷಗಳಿಂದ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಕೋರ್ಟ್ ಆದೇಶ ಇದ್ದರೆ ತೋರಿಸಬೇಕು ಎಂದು ಆಗ್ರಹಿಸಿದರು. ಸೈಟ್‌ಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆರೋಪಿಸಿದ ಯಶ್ ತಾಯಿ, “ನಾನು ಸಿಐಡಿ ಅಲ್ಲ, ಆದರೆ ಎಲ್ಲಾ ಮಾಹಿತಿ ಸಂಗ್ರಹಿಸಿದ್ದೇನೆ. ಇದನ್ನು ಸರ್ಕಾರಕ್ಕೆ ನೀಡುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ:
ಘಟನೆಯ ವೇಳೆ ಬೇಲಿಯ ಜೊತೆಗೆ ಸೈಟ್‌ನಲ್ಲಿ ಅಳವಡಿಸಿದ್ದ ಕ್ಯಾಮೆರಾ ಕಿತ್ತುಹಾಕಲಾಗಿದೆ, ಬೀಗ ಮುರಿಯಲಾಗಿದೆ ಹಾಗೂ ವಿದ್ಯುತ್ ಸಾಮಾನುಗಳನ್ನು ಕಳವು ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಇದು ಕಾನೂನುಬಾಹಿರ ನಡೆ ಮತ್ತು ಈ ಪ್ರದೇಶದಲ್ಲಿ ನಡೆಯುತ್ತಿರುವ ದಂಧೆಯ ಭಾಗ ಎಂದು ಆರೋಪಿಸಿದರು.



