ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಆರೋಪದಡಿ ಮಂತ್ರಿ ಗ್ರೂಪ್ ಡೆವಲಪರ್ಸ್ ಕಂಪನಿಗೆ ಸೇರಿದ 300.4 ಕೋಟಿ ರೂಪಾಯಿ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಏಳು ವರ್ಷವಾದರೂ ಫ್ಲ್ಯಾಟ್ ನಿರ್ಮಿಸದೆ ಇತರ ಉದ್ದೇಶಗಳಿಗೆ ಹಣ ವರ್ಗಾವಣೆ ಮಾಡಿದ ಗಂಭೀರ ಆರೋಪದಡಿ ಕಂಪನಿ ವಿರುದ್ಧ ಸುಬ್ರಮಣ್ಯನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು.
ತನಿಖಾ ಹಂತದಲ್ಲಿ ಅಕ್ರಮ ಎಸಗಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದರಿಂದ ಕಳೆದ ಜೂನ್ 24ರಂದು ಮಾಲೀಕ ಹಾಗೂ ಎಂಡಿಯಾಗಿರುವ ಸುಶೀಲ್ ಪಾಂಡುರಂಗ ಎಂಬವರನ್ನು ಇಡಿ ಬಂಧಿಸಿತ್ತು. ವಿ
ಇದೀಗ 300.4 ಕೋಟಿ ರೂಪಾಯಿ ಸ್ಥಿರಾಸ್ತಿಯನ್ನು ಇಡಿ ಜಪ್ತಿ ಮಾಡಿದೆ.