ಗಾಂಜಾ ಅಕ್ರಮ ಸಾಗಾಣಿಕೆ: ಸೊತ್ತು ಸಹಿತ ಇಬ್ಬರು ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ಬೀದರ್:

ಗಾಂಜಾ ಅಕ್ರಮ ಸಾಗಾಣಿಕೆ ಮಾಡುತ್ತಿದ್ಡ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 1.23 ಕೋಟಿ ಮೌಲ್ಯದ 118 ಕೆಜಿ ಗಾಂಜಾ, ಒಂದು ಮಾರುತಿ ಸುಜುಕಿ ಕಾರ್, 3 ಮೊಬೈಲ್ ಹಾಗೂ 15 ಸಾವಿರ ರೂಪಾಯಿ ನಗದು ಹಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹೇಳಿದರು.

ಅವರು ಶನಿವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜೂನ್ 24 ರಂದು ಬೀದರ್ ನಿಂದ ಹುಮನಾಬಾದ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಣಿಕ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಇಳಿದ ಪೊಲೀಸರು ಹುಮನಾಬಾದ ಪಟ್ಟಣದ ರಾಮನರಾಜ ಕಾಲೇಜಿನ ಬಳಿ ಆರೋಪಿಗನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಯಲ್ಲಿ ಓರ್ವ ಕರ್ನಾಟಕ ಮೂಲದವನು, ಇನ್ನೊರ್ವ ಯುಪಿ ಮೂಲದ ಮಹಾರಾಷ್ಟ್ರ ನಿವಾಸಿಯಾಗಿದ್ದಾನೆ ಎಂದರು.

ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಸಿಬ್ಬಂದಿಗಳು ಉತ್ತಮ ಕೆಲಸ ಮಾಡಿದ್ದು ಇವರ ಕಾರ್ಯವನ್ನು ಮೆಚ್ಚಿ ಕರ್ನಾಟಕ ರಾಜ್ಯ ಪೋಲಿಸ್ ಮಹಾನಿರ್ದೇಶಕರು ಬಹುಮಾನ ವಿತರಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಿಂದ ಅಂತಾರಾಜ್ಯ ಗಾಂಜಾ ಸಾಗಾಣಿಕೆ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 16 ಅಕ್ರಮ ಗಾಂಜಾ ಸಾಗಾಣಿಕೆಯ ಪ್ರಕರಣ ಭೇದಿಸಿ 10.17 ಕೋಟಿ ಮೌಲ್ಯದ 1017 ಕೆಜಿ ಗಾಂಜ ವಶಕ್ಕೆ ಪಡೆಯಲಾಗಿದೆ ಎಂದರು.

ಮಫ್ತಿಯಲ್ಲಿ ಪೋಲಿಸ್ ಠಾಣೆಯ ಕಾರ್ಯವೈಖ ಪರಿಶೀಲನೆ: ಜಿಲ್ಲೆಯಲ್ಲಿರುವ ಪೋಲಿಸ್ ಠಾಣೆಗಳಲ್ಲಿ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇಲ್ಲವೋ ಎನ್ನುವ ಮಾಹಿತಿ ಪಡೆಯಲು 29 ಪೋಲಿಸ್ ಸಿಬ್ಬಂದಿಗಳನ್ನು ಜಿಲ್ಲೆಯ 29 ವಿವಿಧ ಪೋಲಿಸ್ ಠಾಣೆಗೆ ತೆರಳಿ ವಿವಿಧ ರೀತಿಯ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಲಾಗಿತ್ತು. ಇವರು ತೆರಳಿದ 29 ಠಾಣೆಗಳಲ್ಲಿ 20 ಠಾಣೆಯ ಸಿಬ್ಬಂದಿಗಳು ಉತ್ತಮವಾಗಿ ಸ್ಪಂದಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದರು, ಆದರೆ ಉಳಿದ 9 ಠಾಣೆಗಳಲ್ಲಿ ಸಿಬ್ಬಂದಿಗಳು ಪ್ರಕರಣ ದಾಖಲಿಸಲು ನಿರಾಕರಿಸಿದರು ಅವರಿಗೆ ಎಎಸ್ಪಿ ಹಾಗೂ ಡಿಎಸ್ಪಿ ಅವರಿಂದ ತಿಳುವಳಿಕೆ ನೀಡಲಾಗಿದೆ ಎಂದು ಹೇಳಿದರು.

ಸಂಚಾರ ಸುವ್ಯವಸ್ಥೆಗೆ ಕ್ರಮ: ಜಿಲ್ಲೆ ಜನರಿಗೆ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ಸಂಚಾರ ಸುವ್ಯವಸ್ಥೆಗಾಗಿ ಪೋಲಿಸ್ ಇಲಾಖೆ, ನಗರಸಭೆ, ಪಿ.ಡಬ್ಲ್ಯೂಡಿ. ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಈಗಾಗಲೇ ಸಂಚಾರ ಸುವ್ಯವಸ್ಥೆಗಾಗಿ ಯಾವ ಇಲಾಖೆಯಿಂದ ಏನೆಲ್ಲಾ ಕೆಲಸ ಕಾರ್ಯಗಳು ನಡೆಯಬೇಕು ಎನ್ನುವ ಮಾಹಿತಿ ಪಡೆಯಲು ಜಂಟಿಯಾಗಿ ಸಿಟಿ ರೌಡ್ಸ ನಡೆಸಲಾಗಿದೆ ಎಂದ ಅವರು ರಸ್ತೆ ಮೇಲೆ ಓಡಾಡುವ ಬಿಡಾಡಿ ಗೋವುಗಳಿಗೆ ವೆಟರನರಿ ಇಲಾಖೆ ಸಹಾಯದಿಂದ ಅವುಗಳಿಗೆ ಗೋಶಾಲೆಗಳಲ್ಲಿ ಬೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಹುಮನಾಬಾದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಾಜಪುತ, ಹುಮನಾಬಾದ ಸಿಪಿಐ ಶರಣಬಸಪ್ಪಾ ಕೋಡ್ಲಾ, ಪಿಎಸ್‌ಐಗಳಾದ ಸುರೇಶ್ ಹಜ್ಜರಗಿ, ಬಸವರಾಜ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!