ಎತ್ತುಗಳ ಅಕ್ರಮ ಸಾಗಾಟ: ಕಂಟೇನರ್ ಸಹಿತ ಇಬ್ಬರ ಬಂಧನ

ಹೊಸ ದಿಗಂತ ವರದಿ , ಹೊನ್ನಾವರ:

ಪಟ್ಟಣದ ಬೆಂಗಳೂರು ಸರ್ಕಲ್ ಬಳಿ ಶನಿವಾರ ಕಾನೂನು ವಿರುದ್ಧವಾಗಿ 21 ಎತ್ತುಗಳು ಮತ್ತು ಒಂದು ಕಂಟೇನರ್ ಲಾರಿಯನ್ನು ವಶಪಡಿಸಿಕೊಂಡು ಎತ್ತುಗಳ ಸಾಗಾಟದಲ್ಲಿ ತೊಡಗಿದ್ದ ಇಬ್ಬರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.

ಚಾಲಕ ಹಾವೇರಿ ಜಿಲ್ಲೆಯ ಯಲವಟ್ಟಿಯ ಇಸ್ಮಾಯಿಲ್ ತಂದೆ ಖಾದರ್ ಸಾಬ ಹಾಗೂ ಲಾರಿಯ ಕ್ಲೀನರ್ ಮಹಾರಾಷ್ಟ್ರದ ಅಹಮ್ಮದ್ ನಗರದ ರಾಜೇಂದ್ರ ಬಲೀದ್ ಬಂಧಿತ ಆರೋಪಿಗಳು. ಆರೋಪಿತರು 21  ಎತ್ತುಗಳನ್ನು ಹಿಂಸಾತ್ಮಕವಾಗಿ ಕಂಟೇನರ್ ಒಂದರಲ್ಲಿ ಕಟ್ಟಿಹಾಕಿ ಮಹಾರಾಷ್ಟ್ರದಿಂದ ಭಟ್ಕಳ ಕಡೆಗೆ ಸಾಗಾಟದಲ್ಲಿ ತೊಡಗಿದ್ದರು.

ಖಚಿತ ಮಾಹಿತಿ ಆಧರಿಸಿ ಹೊನ್ನಾವರ ಪೋಲಿಸರು ದಾಳಿ ನಡೆಸಿ ಜಾನುವಾರುಗಳನ್ನು, ಲಾರಿಯನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಸಾಗಾಟದಲ್ಲಿ ಇರುವಾಗಲೇ ಒಂದು ಗೂಳಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಹೊನ್ನಾವರ ಪಿಎಸ್‌ಐ ಗಣೇಶ ನಾಯ್ಕ ಮತ್ತು ಮಹಾಂತೇಶ ನಾಯಕ ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!