ಅರಬ್ಬಿ ಕಡಲಲ್ಲಿ ಅಕ್ರಮ ಟ್ರಾಲಿಂಗ್: ಕಾಸರಗೋಡಿನಲ್ಲಿ ಮೂರು ಬೋಟ್ ಸ್ವಾಧೀನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಮೀನುಗಾರಿಕೆ ವಿರುದ್ಧ ಸಮರ ಮುಂದುವರಿಸಿರುವ ಮೀನುಗಾರಿಕಾ ಇಲಾಖೆ, ಕಾಸರಗೋಡು ಪೊಲೀಸರು, ಕರ್ನಾಟಕಕ್ಕೆ ಸೇರಿದ ಮೂರು ಬೋಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಮೀನುಗಾರಿಕಾ ಇಲಾಖೆ, ತ್ರಕ್ಕರಿಪುರ, ಶಿರಿಯ, ಬೇಕಲ ಕರಾವಳಿ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ಸಂದರ್ಭ ಮೂರು ಬೋಟ್ ಮಾಲಕರಿಂದ ಒಟ್ಟು 7.5 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ.

ಈ ಬೋಟ್‌ಗಳು ರಾತ್ರಿ ಸಮಯದಲ್ಲಿ ಅಕ್ರಮವಾಗಿ ಟ್ರಾಲಿಂಗ್ ನಡೆಸಿದ್ದವು. ಕೇರಳ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!