ಹೊಸದಿಗಂತ ವರದಿ ಕಲಬುರಗಿ:
ರಾಜ್ಯ ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ಕುರುಡು ಕಾಂಚಾಣದ ಜೊತೆ ಜೊತೆಗೆ ಗಾಂಜಾ ಸಾಗಾಟ ಕೂಡ ಸದ್ದು ಮಾಡುತ್ತಿದ್ದು, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಪೋಲಿಸರು ಸೀಜ್ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ್ ತಾಲೂಕಿನ ಕಿಣ್ಣಿ ಸಡಕ್ ಚೆಕ್ ಪೋಸ್ಟ್ ಬಳಿ ಕಲ್ಯಾಣ ಕನಾ೯ಟಕ ಸಾರಿಗೆ ಬಸ್‌ನಲ್ಲಿ ಸ್ಕೂಲ್ ಬ್ಯಾಗ್, ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಸೈಯದ್ ಅಬ್ದುಲ್ ಮನಾನ್ ಎಂಬ ವ್ಯಕ್ತಿ 8 ಕಿ.ಲೋ.ಗಾಂಜಾ ಸಾಗಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಕ್ರಮ ಗಾಂಜಾವನ್ನು ಬೀದರ್ ನಿಂದ ಖರೀದಿಸಿ, ಕಲಬುರಗಿ ಕಡೆಗೆ ತೆಗೆದುಕೊಂಡು ಬರುತ್ತಿದ್ದ ವೇಳೆ ಪೋಲಿಸರು ಸೀಜ್ ಮಾಡಿದ್ದಾರೆ.
ಕಮಲಾಪುರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.