ಹೊಸದಿಗಂತ ವರದಿ ಜೋಯಿಡಾ :
ಜೋಯಿಡಾ ತಾಲೂಕಿನ ಅನಮೋಡ ಚೆಕಪೋಸ್ಟ ಬಳಿ ಖಚಿತ ಮಾಹಿತಿ ಆಧಾರದ ಮೇಲೆ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವಾಹನ ಮತ್ತು ಸರಾಯಿಯನ್ನು ಅನಮೋಡ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ಈಡಿಗ ವೆಂಕಟರಮಣ ಧನಂಜಯ ಗೌಡ, ಈಡಿಗ ರವಿ ಮದ್ದಿಲೇಟಿ ಆಂದ್ರಪ್ರದೇಶ ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ ಮಾಲಿಕನ್ನು ಪತ್ತೆ ಹಚ್ಚಲಾಗುತ್ತಿದೆ. ಅಶೋಕ ಲೈಲೆಂಡ್ ವಾಹನ ಸಂಖ್ಯೆ AP04 TZ 0727 ರಲ್ಲಿ 264 ಲೀ ಸರಾಯಿ 161.280 ಬಿಯರ್ ಸೇರಿ ವಿವಿಧ ರೀತಿಯ ಮದ್ಯ ಮತ್ತು ವಾಹನ ಸೇರಿ ಒಟ್ಟು ಅಂದಾಜು ಮೌಲ್ಯ 765280 ರೂ. ಗಳಾಗಿದೆ.
ಈ ಕಾರ್ಯಾಚರಣೆ ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ ಜಗದೀಶ್ ಎನ್ ಕೆ ಹಾಗೂ ಅಬಕಾರಿ ಉಪ ಅಧಿಕ್ಷಕರು ಯಲ್ಲಾಪುರ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅನಮೋಡ ಅಬಕಾರಿ ಪಿ.ಎಸ್.ಐ ಟಿ.ಬಿ.ಮಲ್ಲಣ್ಣನವರ ಸಿಬ್ಬಂದಿಗಳಾದ ರಾಜು ಭಟ್ಕಲ್,ವಾಯ್ ಎಪ್ ಕಣ್ಣೂರ,ಯು ಎನ್ ತುಳಜಿ, ಎನ್ ಜಿ ಜೋಗಳೇಕರ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.