ಹೊಸದಿಗಂತ ವರದಿ ಕುಷ್ಟಗಿ:
ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆ ವಿಷ ಸೇವಿಸಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ.
ಪೀರಸಾಬ್ ನದಾಫ್ (33), ಶಾರದಾ ಶರಣಪ್ಪ ಬಸಾಪೂರ (30) ಮೃತ ದುದೈವಿಗಳು. ಪೀರಸಾಬ್ ಹಾಗೂ ಶಾರದಾ ಇಬ್ಬರಿಗೂ ಬೇರೆ ಬೇರೆ ಮದುವೆ ಆಗಿತ್ತು. ಆದರೂ, ಕೂಡ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಅನೈತಿಕ ಸಂಬಂಧ ತಿಳಿದ ಪೀರಸಾಬನ ಪತ್ನಿ ಮೃತ ಶಾರದಾಳ ಜೊತೆ ಜಗಳವಾಡಿದ್ದಳು. ದೂರ ಆಗುವುದಾದರೇ ಇಬ್ಬರು ಜಗತ್ತಿನಿಂದ ದೂರ ಆಗುತ್ತೇವೆ ಅಂತ ಪೀರಸಾಬ್ ಹಾಗೂ ಶಾರದಾ ಅಂದಿದ್ದರಂತೆ. ಊರ ಹಿರಿಯರು ಇಬ್ಬರಿಗೂ ತಿಳುವಳಿಕೆ ಹೇಳಿದ್ದರು. ಆದರೂ ಕೂಡ ಪೀರಸಾಬ್ ಹಾಗೂ ಶಾರದಾ ಯಾರ ಮಾತು ಕೇಳಿರಲಿಲ್ಲ.
ಜಮೀನಿಗೆ ತೆರಳಿ ಇಬ್ಬರು ಒಟ್ಟಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹನಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹನಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.