ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ತೆಲುಗುವಿನಲ್ಲಿ ಸ್ಪರ್ಧಿಯಾಗಿರುವ ಕನ್ನಡದ ನಟಿ ಸಂಜನಾ ಗಲ್ರಾನಿ `ನನ್ನನ್ನು ಮನೆಗೆ ಕಳಿಸಿಬಿಡಿ, ನನ್ನ ಕೈಯಿಂದ ಆಗುತ್ತಿಲ್ಲ. ನಾನು ಸತ್ತೇ ಹೋಗ್ತೇನೆ’ ಎಂದು ಕಣ್ಣೀರಿಟ್ಟಿದ್ದಾರೆ.
ತೆಲುಗು ಬಿಗ್ ಬಾಸ್‌ನಲ್ಲಿ ಫ್ಯಾಮಿಲಿ ವೀಕ್ ಆಗ್ತಿದೆ. ಕೆಲವು ದಿನಗಳ ನಂತರ ಮನೆಯ ಸದಸ್ಯರು ತಮ್ಮ ಕುಟುಂಬವನ್ನು ನೋಡಿ ಭಾವುಕರಾಗುತ್ತಿದ್ದಾರೆ . ಶನಿವಾರದ ಸಂಚಿಕೆಯಲ್ಲಿ, ಒಂದು ಡಬಲ್ ಎಲಿಮಿನೇಷನ್ ಜೊತೆಗೆ ಪ್ರತಿಯೊಬ್ಬರೂ ಎರಡು ಹೆಸರುಗಳನ್ನು ಹೇಳಿ ,ಯಾರು ಹೆಚ್ಚು ಬೆಂಬಲ ನೀಡುತ್ತಾರೆ ಮತ್ತು ಯಾರು ಆಟಕ್ಕೆ ಅಡ್ಡಿಯಾಗಿದ್ದಾರೆ ಎಂಬುದು ಸೂಚಿಸಲು ಬಿಗ್ ಬಾಸ್ ಹೇಳಿದ್ದರು.
ಬಹುತೇಕ ಸ್ಪರ್ಧಿಗಳು ಸಂಜನಾ ತಮ್ಮ ಆಟಕ್ಕೆ ಅಡ್ಡಿ ಆಗುತ್ತಿದ್ದಾರೆ ಎಂದರು. ಇದರಿಂದಾಗಿ ಅವರಿಗೆ ‘ನೋ ಫ್ಯಾಮಿಲಿ ವೀಕ್’ ಎಂಬ ಶಿಕ್ಷೆ ವಿಧಿಸಲಾಯ್ತು. ಅದನ್ನು ಸ್ಪರ್ಧಿಗಳೇ ಅವರಿಗೆ ನೀಡಿದರು.

ಇದನ್ನು ನೋಡಿ ಸಂಜನಾ ಭಾವುಕರಾದರು. ಏಕೆಂದರೆ ಸಂಜನಾಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಸಂಜನಾ ಒಂದು ತಿಂಗಳ ಮಗುವನ್ನು ಮನೆಯಲ್ಲಿಯೇ ಬಿಟ್ಟು ಶೋಗೆ ಬಂದಿದ್ದಾರೆ. ಪ್ರತಿನಿತ್ಯವೂ ತಮ್ಮ ಕುಟುಂಬವನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.
ನಾಗಾರ್ಜುನ ಅವರನ್ನು ಕುರಿತು, ‘ಸರ್, ನಾನು ಮನೆಗೆ ಹೋಗುತ್ತೇನೆ ಸರ್.. ನನ್ನಿಂದ ಇಲ್ಲಿರಲು ಸಾಧ್ಯವಿಲ್ಲ.. ನಾನು ಸಾಯುತ್ತೇನೆ.. ಇಲ್ಲ ಸರ್, ನಾನು ಹೋಗುತ್ತೇನೆ.. ನನಗೆ ಈ ಆಟ ತುಂಬಾ ಇಷ್ಟ ಮತ್ತು ಪ್ರತಿ ವಾರ ನಿಮ್ಮನ್ನು ನೋಡುವುದು ನನಗೆ ತುಂಬಾ ಇಷ್ಟ, ಆದರೆ ನಾನು ಇನ್ನು ಮುಂದೆ ಇರಲು ಸಾಧ್ಯವಿಲ್ಲ ಸರ್.. ನಾನು ದಿನದಲ್ಲಿ ಹಲವು ಬಾರಿ ಅಳುತ್ತೇನೆ. ನಾನು ಈ ಶೋವನ್ನು ಗೌರವಿಸುತ್ತೇನೆ.. ನಾನು ಇಲ್ಲಿ ಯಾರಿಗೂ ಅಷ್ಟು ಕೆಟ್ಟದ್ದನ್ನು ಮಾಡಿಲ್ಲ ಸರ್..”ಎಂದು ಸಂಜನಾ ಕಣ್ಣೀರು ಹಾಕುತ್ತಾ ಹೇಳಿದರು.ಆದರೆ ನಾಗಾರ್ಜುನ ಅದು ಸಾಧ್ಯವಿಲ್ಲ ಎಂದರು.
ಅಷ್ಟರಲ್ಲಿ ಕಲ್ಯಾಣ್ ಕೈ ನಾನು ನನ್ನ ಫ್ಯಾಮಿಲಿ ವೀಕ್‌ವನ್ನು ವಾರವನ್ನು ತ್ಯಾಗ ಮಾಡುತ್ತೇನೆ ಸರ್ ಎಂದರು. ಭರಣಿ ಕೂಡ ಎದ್ದು ನಿಂತು ಹೀಗೆ ಹೇಳಿದರು. ಕಲ್ಯಾಣ್ ಮತ್ತು ಭರಣಿ ಅವರು ತಮ್ಮ ಫ್ಯಾಮಿಲಿ ಬದಲಿಗೆ ಸಂಜನಾ ಫ್ಯಾಮಿಲಿಯನ್ನು ಕರೆಸಿ ಎಂದು ಕೇಳಿಕೊಂಡರು.

