ಇನ್ಮುಂದೆ ಅವಳ ಕರಿಮಣಿ ಮಾಲೀಕ ನಾನಲ್ಲ: ವಿವಾಹ ಬಂಧನಕ್ಕೆ ಪೂರ್ಣ ವಿರಾಮ ಇಟ್ಟ ರಿಕ್ ಕೀರ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಸೀಸನ್ 4ರ ಖ್ಯಾತಿಯ ಕಿರಿಕ್ ಕೀರ್ತಿ (Kirik Keerthi) ಹಲವು ವರ್ಷಗಳ ವಿವಾಹ ಬಂಧನಕ್ಕೆವಿರಾಮ ಇಟ್ಟಿದ್ದಾರೆ.
ಪತ್ನಿ ಅರ್ಪಿತಾ ಪೂರ್ಣ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಮೂಲಕ ಹಲವು ವರ್ಷಗಳ ವಿವಾಹ ಬಂಧನಕ್ಕೆ ಕಿರಿಕ್ ಕೀರ್ತಿ‌ ಮತ್ತು ಅರ್ಪಿತಾ ಪೂರ್ಣ ವಿರಾಮ ಇಟ್ಟಿದ್ದಾರೆ.

ಹಲವು ತಿಂಗಳ ಹಿಂದೆ ತಮ್ಮ ವೈವಾಹಿಕ ಸಂಬಂಧದ ಬಗ್ಗೆ ಕಹಿಯಾಗಿ ಮಾತನಾಡಿದ್ದರು.ಇದರ ಬೆನ್ನಲ್ಲೇ ಕಾನೂನಿನ ಪ್ರಕಾರ ಈ ಜೋಡಿ ಡಿವೋರ್ಸ್‌ ಪಡೆದಿದೆ.

ಈ ಬಗ್ಗೆ ಅಧಿಕೃತವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಕಿರಿಕ್‌ ಕೀರ್ತಿ, ಕಾನೂನಿನ ಪ್ರಕಾರ ನನ್ನ ಮತ್ತು ಅರ್ಪಿತಾ ನಡುವಿನ ಪತಿ-ಪತ್ನಿ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನುಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ… ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ. ಕಹಿ ನೆನಪುಗಳು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲಿ. ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕೆಲವು ದಿನಗಳಿಂದ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಇಬ್ಬರೂ ಒಟ್ಟಿಗೆ ಜೀವಿಸುತ್ತಿರಲಿಲ್ಲ. ಅರ್ಪಿತಾ ಅವರು ತಮ್ಮ ತಂದೆಯ ಮನೆಯಲ್ಲಿ ಮಗನ ಜತೆಗೆ ಜೀವಿಸುತ್ತಿದ್ದರು, ಕಿರಿಕ್ ಕೀರ್ತಿ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here