ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಲಾದ ರಾಕ್ಷಸೀಯ ಕೃತ್ಯವೊಂದು ಬೆಳಕಿಗೆ ಬಂದಿದೆ.
ಕೇರಳದ ಎರ್ನಾಕುಲಂನಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ಬಾಲಕಿ ವಾಸವಿರುವ ಕಟ್ಟಡಕ್ಕೆ ಕೆಲ ದಿನಗಳ ಹಿಂದಷ್ಟೇ ವಾಸ್ತವ್ಯಕ್ಕೆ ಬಂದಿದ್ದ ವ್ಯಕ್ತಿ ಈ ಅಮಾನವೀಯ ಕೃತ್ಯವೆಸಗಿದ್ದು, ಲೈಂಗಿಕ ದೌರ್ಜನ್ಯದ ಬಳಿಕ ಬಾಲಕಿಯ ಕೊಲೆ ಮಾಡಿ ಜೋಳಿಗೆಯಲ್ಲಿ ಹಾಕಿದ್ದಾನೆ . ಬಾಲಕಿಯ ಶವ ಸಮೀಪದ ಜವುಗು ಪ್ರದೇಶದಲ್ಲಿ ಪತ್ತೆಯಾಗಿದೆ.. ಶುಕ್ರವಾರ ಈ ಘಟನೆ ನಡೆದಿದ್ದು, ನಂತರ ಆರೋಪಿಯೇ ತಪ್ಪೊಪ್ಪಿಕೊಂಡಿದ್ದಾನೆ.
ಶುಕ್ರವಾರ ಸಂಜೆಯೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಆತ ಪಾನಮತ್ತ ಸ್ಥಿತಿಯಲ್ಲಿದ್ದ ಕಾರಣ ಮಾಹಿತಿ ಪಡೆಯಲು ಗಂಟೆಗಳೇ ಬೇಕಾಗಿತ್ತು.
ಬಿಹಾರ ಮೂಲದ ದಂಪತಿಯ 5 ವರ್ಷದ ಮಗು ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿತ್ತು. ಸುತ್ತಮುತ್ತಲ ಸಿಸಿಟಿವಿ ಪರಿಶೀಲಿಸಿದಾಗ ಬಿಹಾರ ಮೂಲದವನೇ ಆದ ಅಶ್ಫಾಖ್ ಅಸ್ಲಾಂ (Asfaq Aslam) ಎಂಬಾತ ಬಾಲಕಿಯನ್ನು ಕರೆದುಕೊಂಡು ಹೋಗಿರುವುದು ಕಂಡು ಬಂತು ನಂತರ ರಾತ್ರಿ 9. 30ರ ಸುಮಾರಿಗೆ ಆತನನ್ನು ವಶಕ್ಕೆ ಪಡೆದಾಗ ಆತ ಕಂಠಪೂರ್ತಿ ಕುಡಿದಿದ್ದು, ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲೂ ಆತ ಇರಲಿಲ್ಲ ಎಂದು ಎರ್ನಾಕುಲಂ ಗ್ರಾಮೀಣ ಎಸ್ ಪಿ ವಿವೇಕ್ ಕುಮಾರ್ ಹೇಳಿದ್ದಾರೆ.
ಇದಾದ ಬಳಿಕ ಶನಿವಾರ ಬೆಳಗ್ಗೆ ಅಸ್ಲಾಂ ತಪ್ಪೊಪ್ಪಿಕೊಂಡಿದ್ದು, ಮಗುವನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದ ಎಂಬುದನ್ನು ಹೇಳಿದ್ದಾನೆ. ಆರೋಪಿ ಇತ್ತೀಚೆಗಷ್ಟೇ ಬಾಲಕಿ ಹಾಗೂ ಆಕೆಯ ಕುಟುಂಬ ವಾಸವಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದ. ನೀರಿನಿಂದ ಕುಡಿದ ಜವುಗು ಪ್ರದೇಶದಲ್ಲಿ ಬಾಲಕಿಯ ಶವ ಎಸೆದಿದ್ದ ಆರೋಪಿ ವ ಯಾರಿಗೂ ಕಾಣಬಾರದು ಎಂಬ ಕಾರಣಕ್ಕೆ ಶವವನ್ನು ಕಸ ಹಾಗೂ ಚೀಲಗಳಿಂದ ಮುಚ್ಚಿದ್ದನು.
ಫೇಸ್‌ಬುಕ್‌ನಲ್ಲಿ (Facebook) ಬಾಲಕಿ ನಾಪತ್ತೆಯಾದ ಬಗ್ಗೆ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಆರೋಪಿಯ ಜೊತೆ ಬಾಲಕಿಯನ್ನು ನೋಡಿದ್ದಾಗಿ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲೇ ಈ ವ್ಯಕ್ತಿ ಆರೋಪಿ ಬಳಿ ಬಾಲಕಿಯ ಬಗ್ಗೆ ಕೇಳಿದಾಗ ಆತ, ಆಕೆ ನನ್ನ ಮಗಳು ಎಂದು ಹೇಳಿದ್ದ. ನಂತರ ಆತ ಮಾರುಕಟ್ಟೆಯ ಹಿಂಭಾಗಕ್ಕೆ ಮದ್ಯ ಸೇವನೆಗಾಗಿ ಹೋಗಿದ್ದ. ಅಲ್ಲದೇ ಈ ವೇಳೆ ಬಾಲಕಿಯ ಕೈಯಲ್ಲಿ ಚಾಕೋಲೇಟ್‌ಗಳಿದ್ದವು ಎಂದು ಪೊಲೀಸರಿಗೆ ವ್ಯಕ್ತಿ ಮಾಹಿತಿ ನೀಡಿದ್ದಾರೆ.
ಆತ ನೀಡಿದ ಮಾಹಿತಿ ಆಧರಿಸಿ ಇಡೀ ಮಾರ್ಕೆಟ್ ಸುತ್ತಮುತ್ತ ಹುಡುಕಾಟ ನಡೆಸಲಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಬಾಲಕಿಯನ್ನು ಟ್ರೇಸ್ ಮಾಡುವುದಕ್ಕೆ ಅನೇಕರು ನೆರವಾಗಿದ್ದಾರೆ.
മകളേ മാപ്പ്🌹#keralapolice pic.twitter.com/cCY3boF8hM
— Kerala Police (@TheKeralaPolice) July 29, 2023
ಕ್ಷಮಿಸು ಮಗಳೇ ಎಂದ ಪೊಲೀಸರು
ಕೇರಳ ಪೊಲೀಸರು ಇಂದು ಯುವತಿಯ ಕುಟುಂಬದೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೋರಿದ್ದು, ಮಗುವನ್ನು ಮಡಿಲು ಸೇರಿಸಲಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪುಟ್ಟ ಬಾಲಕಿಯನ್ನು ಕಾಪಾಡಲು ಅಸಮರ್ಥತರಾದ ಪೊಲೀಸರು “ಕ್ಷಮಿಸು ಮಗಳೇ” ಎಂದು ಟ್ವೀಟ್ ಮಾಡಿ ಶೋಕಾಚರಣೆ ಮಾಡಿದ್ದಾರೆ.ಅವಳನ್ನು ಜೀವಂತವಾಗಿ ತರಲು ನಾವು ಮಾಡಿದ ಪ್ರಯತ್ನಗಳು ವಿಫಲವಾಗಿವೆ. ಮಗುವನ್ನು ಅಪಹರಿಸಿದ ಶಂಕಿತನನ್ನು ಬಂಧಿಸಲಾಗಿದೆ ಎಂದು ಮಲಯಾಳಂನಲ್ಲಿ ಪೋಸ್ಟ್ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕೇರಳ ಗವರ್ನರ್ ಅರಿಫ್ ಮೊಹಮ್ಮದ್ ಖಾನ್ (Kerala Governor Arif Mohammed Khan) ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು, ಇದೊಂದು ದುರಾದೃಷ್ಟಕರ ವಿಚಾರ ಎಂದಿದ್ದಾರೆ. ಕೇರಳ ಮಾತ್ರವಲ್ಲ ಇನ್ನೆಲ್ಲೇ ಆದರೂ ಇದನ್ನು ಒಪ್ಪಿಕೊಳ್ಳಲಾಗದು, ಅವರು ಮನುಷ್ಯರಲ್ಲ ರಾಕ್ಷಸರು, ಅವರನ್ನು ಮನುಷ್ಯರೆಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.