Sunday, September 7, 2025

ಬ್ಯಾಲೆಟ್ ಪೇಪರ್ ಜಾರಿಗೆ ತರೋದು ಮೂರ್ಖತನ: ಬಿವೈ ವಿಜಯೇಂದ್ರ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ಪುನರ್‌ಜಾರಿಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬ್ಯಾಲೆಟ್ ಪೇಪರ್ ಜಾರಿಗೆ ತರುವುದೇ ಮೂರ್ಖತನದ ಪರಮಾವಧಿ. ಕಾಂಗ್ರೆಸ್‌ಗೆ ಇವಿಎಂ ಮೇಲಿನ ನಂಬಿಕೆ ಕುಸಿದಿದೆ. ಜನರು ಅವರನ್ನು ತಿರಸ್ಕರಿಸಿದ ಅಸಮಾಧಾನವನ್ನು ಮುಚ್ಚಲು ಈ ರೀತಿಯ ಕಾರಣಗಳನ್ನು ಹುಡುಕುತ್ತಿದ್ದಾರೆ ಎಂದು ಟೀಕಿಸಿದರು.

ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ತೀವ್ರ ಅನುಭವ ಹೊಂದಿದೆ. ಅದನ್ನು ಒಪ್ಪಿಕೊಳ್ಳಲು ಬದಲು ಇವಿಎಂ ಮೇಲೆ ದೋಷಾರೋಪಣೆ ಮಾಡುತ್ತಿದೆ. ಇವಿಎಂಗಳಲ್ಲಿ ನಿಜವಾಗಿಯೂ ದೋಷ ಇದ್ದಿದ್ದರೆ ಹಿಮಾಚಲ, ತೆಲಂಗಾಣ ಮತ್ತು ಕರ್ನಾಟಕಗಳಲ್ಲಿ ಕಾಂಗ್ರೆಸ್ ಹೇಗೆ ಅಧಿಕಾರಕ್ಕೆ ಬಂದಿತು? ಬ್ಯಾಲೆಟ್ ಪೇಪರ್ ಎಂದರೆ ಬೋಗಸ್ ಮತದಾನ ಮತ್ತು ಬೂತ್ ಕ್ಯಾಪ್ಚರಿಂಗ್‌ಗೆ ಅವಕಾಶ. ಅದಕ್ಕಾಗಿ ನಾವು ಅದನ್ನು ವಿರೋಧಿಸುತ್ತೇವೆ ಎಂದರು.

ಇದೇ ವೇಳೆ, ಬಾನು ಮುಷ್ತಾಕ್ ಆಯ್ಕೆ ವಿಷಯಕ್ಕೂ ಪ್ರತಿಕ್ರಿಯಿಸಿದ ವಿಜಯೇಂದ್ರ, ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿ, ಹಿಂದು ಮಹಿಳೆ ದೀಪಾ ಬಸ್ತಿಯನ್ನು ಯಾಕೆ ಕಡೆಗಣಿಸಿದರು ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಇನ್ನೂ ಉತ್ತರ ಕೊಟ್ಟಿಲ್ಲ. ಮೊದಲು ಅದಕ್ಕೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ