ಏಷ್ಯಾಕಪ್ ಕುರಿತು ಮಹತ್ವದ ಮಾಹಿತಿ: ಸೆ. 9 ರಿಂದ ಟೂರ್ನಿ ಆರಂಭ, ಭಾರತ-ಪಾಕ್ ಮ್ಯಾಚ್ ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2025 ರ ಏಷ್ಯಾಕಪ್ ಆಯೋಜಕತ್ವದ ಹಕ್ಕು ಬಿಸಿಸಿಐ ಬಳಿ ಇರಲಿದ್ದು, ಸೆಪ್ಟೆಂಬರ್‌ 9 ರಿಂದ ಈ ಪಂದ್ಯಾವಳಿ ಆರಂಭವಾಗಲಿದ್ದು, ಸೆಪ್ಟೆಂಬರ್ 28 ರಂದು ಫೈನಲ್ ಪಂದ್ಯ ನಡೆಯಲಿದೆ.

8 ತಂಡಗಳ ನಡುವೆ ನಡೆಯಲ್ಲಿರುವ ಈ ಟೂರ್ನಿ ಯುಎಇಯಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಪಂದ್ಯಾವಳಿಯಲ್ಲಿ ಒಂದೇ ಗುಂಪಿನಲ್ಲಿರಲಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಜುಲೈ 26 ರ ಶನಿವಾರ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಏಷ್ಯಾಕಪ್ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ಪಂದ್ಯಾವಳಿ ಯುಎಇಯಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 9 ರಂದು ಪ್ರಾರಂಭವಾಗಲಿರುವ ಈ ಪಂದ್ಯಾವಳಿಯ ಫೈನಲ್ ಸೆಪ್ಟೆಂಬರ್ 28 ರಂದು ನಡೆಯಲಿದೆ ಎಂದು ನಖ್ವಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯೂ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆಯಲಿವೆ ಎಂದು ವರದಿಯಾಗಿದೆ. ಉಭಯ ತಂಡಗಳ ನಡುವೆ ಗುಂಪು ಹಂತದ ಮೊದಲ ಮುಖಾಮುಖಿ ಸೆಪ್ಟೆಂಬರ್ 14 ರಂದು ನಡೆಯುವ ಸಾಧ್ಯತೆಗಳಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!