ಸಾರಿಗೆ ಇಲಾಖೆಯಿಂದ ಮಹತ್ವದ ಆದೇಶ: ಅಂಧರಿಗೆ ರಾಜ್ಯದ ಎಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕ ಸರ್ಕಾರ ಈಗ ಅಂಧರು ರಾಜ್ಯದ ಎಲ್ಲ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಹಿಂದಿನ ವ್ಯವಸ್ಥೆಯಲ್ಲಿ ಅಂಧರು ಯಾವುದೇ ಒಂದು ನಿಗಮದ ಪಾಸ್ ಪಡೆದಿದ್ದರೆ, ಆ ನಿಗಮದ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ ಸಾಧ್ಯವಾಗುತ್ತಿತ್ತು. ಉದಾಹರಣೆಗೆ, ಬಿಎಂಟಿಸಿ ಪಾಸ್ ಹೊಂದಿರುವವರು ಬಿಎಂಟಿಸಿ ಬಸ್‌ಗಳಲ್ಲಿ ಮಾತ್ರ ಓಡಾಡಬಹುದಿತ್ತು. ಆದರೆ ಕೆಎಸ್‌ಆರ್‌ಟಿಸಿ, ನЕКRTC ಅಥವಾ NWKRTC ಬಸ್‌ಗಳಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಪಡೆಯಬೇಕಾಗುತಿತ್ತು. ಇದರಿಂದಾಗಿ ಅನೇಕ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು.

ಈ ಹಿನ್ನೆಲೆ ಇಂದು ಸಾರಿಗೆ ಇಲಾಖೆ ಹೊಸ ಆದೇಶ ಹೊರಡಿಸಿದೆ. ಅಂಧತ್ವ ಹೊಂದಿರುವವರು ಯಾವುದೇ ನಿಗಮದ ಪಾಸ್ ಹೊಂದಿದ್ದರೂ, ಎಲ್ಲ 4 ನಿಗಮಗಳ ಬಸ್‌ಗಳಲ್ಲಿ ಅಂದರೆ ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC), ನЕКRTC ಮತ್ತು NWKRTC ಯಲ್ಲಿ ಉಚಿತವಾಗಿ ಸಂಚರಿಸಬಹುದು.

ಈ ಆದೇಶವನ್ನು ಸಾರಿಗೆ ಸಚಿವರೇ ನೇರವಾಗಿ ನಾಲ್ಕು ನಿಗಮಗಳಿಗೆ ಜಾರಿಗೆ ತರಲು ಸೂಚಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ಶೀಘ್ರದಲ್ಲೇ ಈ ಸೌಲಭ್ಯ ರಾಜ್ಯದಾದ್ಯಂತ ಲಭ್ಯವಾಗಲಿದೆ. ಈ ನಿರ್ಧಾರದಿಂದ ಸುಮಾರು ಲಕ್ಷಾಂತರ ಅಂಧರಿಗೂ ಪ್ರಯೋಜನವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!