ಮತದಾರರಿಗೆ ಸುಧಾರಿತ ಸೇವೆ: ಇನ್ಮುಂದೆ 15 ದಿನಗಳಲ್ಲೇ ಮನೆಬಾಗಿಲಿಗೆ ತಲುಪಲಿದೆ ವೋಟರ್‌ ಐಡಿ

ಭಾರತೀಯ ಚುನಾವಣಾ ಆಯೋಗ (ECI) ಮತದಾರರ ಗುರುತಿನ ಚೀಟಿಗಳ ವಿತರಣೆಯಲ್ಲಿ ದಕ್ಷತೆ ತರಲು ಮಹತ್ವದ ಹೆಜ್ಜೆ ಹಾಕಿದ್ದು, ಇನ್ನು ಮುಂದೆ ಹೊಸ ಮತದಾರರ ನೋಂದಣಿ ಅಥವಾ ಬದಲಾವಣೆ ಸಲ್ಲಿಸಿದ ದಿನದಿಂದ 15 ದಿನಗಳಲ್ಲಿ EPIC (Electors Photo Identity Card) ಕಾರ್ಡ್‌ ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ.

ಇದರ ಹಿಂದಿನ ಉದ್ದೇಶವೆಂದರೆ, ಸೇವಾ ವಿತರಣೆಯ ದಕ್ಷತೆ ಮತ್ತು ನೈಜ ಸಮಯದ ಟ್ರ್ಯಾಕಿಂಗ್‌ ಸೌಲಭ್ಯ ಒದಗಿಸುವುದು. ಇದುವರೆಗೆ ಈ ಪ್ರಕ್ರಿಯೆಗೆ ಸುಮಾರು ಒಂದು ತಿಂಗಳಷ್ಟು ಕಾಲ ಹಿಡಿಯುತ್ತಿದ್ದರೆ, ಹೊಸ ವ್ಯವಸ್ಥೆಯಲ್ಲಿ ಕೇವಲ ಹದಿನೈದು ದಿನಗಳಲ್ಲಿ ವೋಟರ್ ಐಡಿ ನಿಮ್ಮ ಕೈ ಸೇರಲಿದೆ.

ಚುನಾವಣಾ ಆಯೋಗದ ಪ್ರಕಾರ, ಈ ನವೀಕೃತ ವ್ಯವಸ್ಥೆಯಲ್ಲಿ ಚುನಾವಣಾ ನೋಂದಣಿ ಅಧಿಕಾರಿ (ERO) EPIC ತಯಾರಿಸಿದ ತಕ್ಷಣದಿಂದಲೇ, ಅಂಚೆ ಇಲಾಖೆಯ (DoP) ಸಹಯೋಗದಲ್ಲಿ ಮನೆಬಾಗಿಲಿಗೆ ತಲುಪಿಸುವವರೆಗೆ ಪ್ರತಿಯೊಂದು ಹಂತವನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಬಹುದಾಗಿದೆ.

ವೋಟರ್ ಐಡಿಗೆ ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು?

NVSP ವೆಬ್‌ಸೈಟ್‌ಗೆ ಭೇಟಿ ನೀಡಿ: https://www.nvsp.in

ಸೈನ್ ಅಪ್ ಮಾಡಿ: ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಕ್ಯಾಪ್ಚಾ ನಮೂದಿಸಿ.

ಖಾತೆ ರಚಿಸಿ ಮತ್ತು OTP ಪರಿಶೀಲನೆ ಮಾಡಿ.

ಲಾಗಿನ್ ಆದ ನಂತರ “ಫಾರ್ಮ್ 6” ಆಯ್ಕೆಮಾಡಿ.

ವೈಯಕ್ತಿಕ ಮತ್ತು ವಿಳಾಸ ವಿವರಗಳೊಂದಿಗೆ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.

ಅರ್ಜಿಯ ಸ್ಥಿತಿಯನ್ನು ಹೀಗೆ ಟ್ರ್ಯಾಕ್ ಮಾಡಬಹುದು:

NVSP ಪೋರ್ಟಲ್‌ಗೆ ಲಾಗಿನ್ ಮಾಡಿ.

“Track Application Status” ವಿಭಾಗದಲ್ಲಿ ನಿಮ್ಮ ಉಲ್ಲೇಖ ಸಂಖ್ಯೆ (Reference Number) ನಮೂದಿಸಿ.

ರಾಜ್ಯ ಆಯ್ಕೆಮಾಡಿ, ಸಲ್ಲಿಸಿ ಕ್ಲಿಕ್ ಮಾಡಿ.

ಅರ್ಜಿಯ ಪ್ರಗತಿಯನ್ನು ನೈಜ ಸಮಯದಲ್ಲಿ ನೋಡಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!