August 4, 2026
Tuesday, August 4, 2026
spot_img

ಚಿತ್ರಪ್ರೇಮಿಗಳ ಜತೆ ಇಮ್ತಿಯಾಜ್ ಅಲಿ ಸೆಲ್ಫಿ ಧಮಾಕಾ: ಬೆಂಗಳೂರಿಗರ ಪ್ರೀತಿಗೆ ಬಾಲಿವುಡ್ ನಿರ್ದೇಶಕ ಭಾವುಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಬಾಲಿವುಡ್ ಚಿತ್ರ ನಿರ್ದೇಶಕ ಇಮ್ತಿಯಾಜ್ ಅಲಿ ತಮ್ಮ ಹೊಸ ಸಿನಿಮಾ ‘ಮೇನ್ ವಾಪಸ್ ಆವುಂಗಾ’ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಿದ್ದರು. ಸಿಲಿಕಾನ್ ಸಿಟಿಯ ಮಾಲ್‌ ಹಾಗೂ ಚಿತ್ರಮಂದಿರಗಳಲ್ಲಿ ಅವರಿಗೆ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ಕೋರಿದ್ದಾರೆ.

ಮಾಲ್‌ಗಳಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮ

ತಮ್ಮ ನೆಚ್ಚಿನ ಸಿನಿಮಾ ಮಾಂತ್ರಿಕನನ್ನು ಕಣ್ಣುಂಬಿಕೊಳ್ಳಲು ಕೋರಮಂಗಲದ ನೆಕ್ಸಸ್ ಮಾಲ್, ಬನ್ನೇರುಘಟ್ಟ ರಸ್ತೆಯ ಪಿವಿಆರ್ ವೇಗಾ ಸಿಟಿ, ಪಿವಿಆರ್ ವಿಆರ್ ಬೆಂಗಳೂರು ಮತ್ತು ಫೀನಿಕ್ಸ್ ಮಾರ್ಕೆಟ್‌ಸಿಟಿಗೆ ಸಾವಿರಾರು ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಚಿತ್ರಮಂದಿರಗಳ ಆವರಣವೆಲ್ಲಾ ಹರ್ಷೋದ್ಗಾರ, ಸೆಲ್ಫಿಗಳ ಅಬ್ಬರ ಹಾಗೂ ಅಭಿಮಾನಿಗಳ ಸಂಭ್ರಮದಿಂದ ಕಳೆಗಟ್ಟಿತ್ತು.

ಪ್ರೇಕ್ಷಕರ ಪ್ರೀತಿಗೆ ಡೈರೆಕ್ಟರ್ ಧನ್ಯವಾದ

ಚಿತ್ರಮಂದಿರಗಳಿಗೆ ಭೇಟಿ ನೀಡಿದ ಇಮ್ತಿಯಾಜ್ ಅಲಿ, ನೇರವಾಗಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು. ಸಿನಿಮಾ ನೋಡಿ ಭಾವುಕರಾದ ಅಭಿಮಾನಿಗಳನ್ನು ಕಂಡು ಸಂತಸ ಹಂಚಿಕೊಂಡ ಅವರು, “‘ಮೇನ್ ವಾಪಸ್ ಆವುಂಗಾ’ ಚಿತ್ರಕ್ಕೆ ಸಿಗುತ್ತಿರುವ ಅಪಾರ ಪ್ರಶಂಸೆಗೆ ಬೆಂಗಳೂರಿಗರೇ ಕಾರಣ” ಎಂದು ಧನ್ಯವಾದ ಅರ್ಪಿಸಿದರು. ದೇಶಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಈ ಚಿತ್ರಕ್ಕೆ ಸಿಲಿಕಾನ್ ಸಿಟಿಯ ಭೇಟಿ ಹೊಸ ಮೆರುಗು ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !