ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮ ಜನ್ಮಭೂಮಿಯಲ್ಲಿ ಸಂಭ್ರಮ ಕಳೆಗಟ್ಟಿದೆ, ಎಲ್ಲಿ ನೋಡಿದರೂ ಅಲ್ಲಿ ಶ್ರೀರಾಮನೇ ಕಾಣಿಸುತ್ತಿದ್ದಾನೆ, ಜನರ ಹೃದಯದಲ್ಲಿಯೂ ಶ್ರೀರಾಮನೇ ನೆಲೆಸಿದ್ದಾನೆ.
ಶ್ರೀರಾಮಲಲಾ ಮೂರ್ತಿಗೆ ಪ್ರಾಣ ತುಂಬುವುದು ಎಂದರೇನು? ಹೇಗಿರಲಿದೆ ಈ ರೋಮಾಂಚಕ ಕ್ಷಣ?
ಈಗಾಗಲೇ ಗರ್ಭಗುಡಿಯಲ್ಲಿ ರಾಮಲಲಾ ಮೂರ್ತಿ ನೆಲೆಸಿದೆ. ಕೃಷ್ಣಶಿಲೆಯಿಂದ ತಯಾರಾದ ಮೂರ್ತಿಗೆ ೮೪ ಸೆಕೆಂಡ್‌ಗಳ ಮಹೂರ್ತದಲ್ಲಿ ಪ್ರಾಣಪ್ರತಿಷ್ಠೆ ಮಾಡಲಾಗುತ್ತದೆ. ಮಧ್ಯಾಹ್ನ 12 ಗಂಟೆ 33 ನಿಮಿಷಕ್ಕೆ ಪ್ರಾಣಪ್ರತಿಷ್ಠೆ ನಡೆಯಲಿದೆ. ಶಿಲೆ ದೇವರಾಗುವ ಅದ್ಭುತ ಪ್ರಕ್ರಿಯೆ ನೋಡಲು ಭಕ್ತಗಣ ಕಾತರವಾಗಿದೆ.
ಅರ್ಚಕರು ವೇದಮಂತ್ರ ಪಠಣೆ ಮಾಡುತ್ತಾರೆ, ಇದು ದೇವರನ್ನು ವಿಗ್ರಹದೊಳಗೆ ಆವಾಹನೆ ಮಾಡುವ ಪ್ರಕ್ರಿಯೆ, ನಂತರ ಚಿನ್ನದ ಸೂಜಿಯಿಂದ ಕಣ್ಣನ್ನು ತೆರೆಯಲಾಗುತ್ತದೆ. ನಂತರ ಕನ್ನಡಿ, ಹಸು, ಹಣ್ಣು ಹಂಪಲನ್ನು ತೋರಿಸಿ, ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಇದಾದ ನಂತರ ಪ್ರಾಣಪ್ರತಿಷ್ಠೆ ಪೂರ್ಣಗೊಳ್ಳುತ್ತದೆ.