ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಸೀಟ್ ವಿಚಾರಕ್ಕೆ ಮಾರಾಮಾರಿಯಾಗಿದೆ.
35 ಪ್ರಯಾಣಿಕರ ಮೇಲೆ ಹಲ್ಲೆಯಾಗಿದ್ದು, ಗಾಯಗೊಂಡ ಪ್ರಯಾಣಿಕರು ಸುಮ್ಮನಾಗಿದ್ದಾರೆ.
ಮೈಸೂರು ಮೂಲದ 35 ಮಂದಿ ತಿರುಪತಿಗೆ ತೆರಳಿದ್ದರು. ತಿರುಪತಿಯಿಂದ ವಾಪಾಸಾಗುವಾಗ ಗಲಾಟೆ ನಡೆದಿದೆ, ಸೀಟ್‌ನಲ್ಲಿ ನಾವು ಕೂರ‍್ತೇವೆ, ನಾವು ಕೂರ‍್ತೇವೆ ಎಂದು ಜಗಳವಾಗಿದೆ. ರಾಜ್ಯದ ಪ್ರಯಾಣಿಕರ ಮೇಲೆ ಇತರರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ನೂರಕ್ಕೂ ಹೆಚ್ಚು ಮಂದಿ ಇಟ್ಟಾಗಿ ಬಂದು ಮೈಸೂರಿನವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ತಕ್ಷಣವೇ ಆಂಧ್ರದ ಪಾಕಲಂ ಪೊಲೀಸರಿಗೆ ಕರೆ ಮಾಡಲಾಗಿದೆ.
ಆದರೆ ಪೊಲೀಸರು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಕೆಲ ಸಮಯದ ನಂತರ ಪೊಲೀಸರು ಬಂದಿದ್ದು, ಗಲಾಟೆಯ ವಿಡಿಯೋವನ್ನು ಜನರ ಫೋನ್‌ನಿಂದ ಡಿಲೀಟ್ ಮಾಡಿಸಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ.