ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಡುವ ಶಾಖದಲ್ಲಿ ದೇಹಕ್ಕೆ ನೀರು ಬೇಕು. ಗಂಟಲು ಒಣಗಿದ್ದರೆ..ಮನುಷ್ಯನಾಗಿರಲಿ, ಪ್ರಾಣಿಗಳಿರಲಿ ನೀರಿಲ್ಲದಿದ್ದರೆ ಬದುಕುವುದು ಕಷ್ಟ. ನೀರಿಲ್ಲದ ಕಾರಣ ಬಾಯಾರಿದ ಒಂಟೆಯೊಂದು ರಸ್ತೆ ಬದಿ ಕದಲದೆ ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಗ ಒಬ್ಬ ದೇವರಂತೆ ಬಂದು ಬಾಟಲಿ ಸಮೇತ ನೀರು ಕೊಟ್ಟು ಒಂಟೆಗೆ ಜೀವ ಕೊಟ್ಟ. ಈ ವಿಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಾಯಾರಿದ ಒಂಟೆ ಸುಸ್ತಾಗಿ ರಸ್ತೆ ಬದಿ ಮಲಗಿದೆ. ಅಷ್ಟರಲ್ಲಿ ದಯಾಮಯಿ ವ್ಯಕ್ತಿಯೊಬ್ಬ ತನ್ನ ಕೈಗಳಿಂದ ಪ್ರಾಣಿಗೆ ನೀರುಣಿಸುವ ಮೂಲಕ ಹೊಸ ಜೀವವನ್ನು ನೀಡಿದ್ದಾನೆ ಎಂದು ಅರಣ್ಯ ಅಧಿಕಾರಿ ಸುಶಾಂತ್ ನಂದಾ ಬರೆದಿದ್ದಾರೆ. ಕೆಲವು ಹನಿ ನೀರು ಒಬ್ಬರ ಜೀವವನ್ನು ಉಳಿಸುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಆ ಮೂಲಕ ಹೋಗುತ್ತಿದ್ದ ಲಾರಿ ಚಾಲಕನೊಬ್ಬ ಒಂಟೆಯನ್ನು ರಸ್ತೆ ಬದಿಯಲ್ಲಿ ಮಲಗಿದ್ದನ್ನು ನೋಡಿ ನೀರಿನ ಬಾಟಲಿಯಲ್ಲಿ ನೀರು ನೀಡಿದ್ದರಿಂದ ಒಂಟೆ ಮತ್ತೆ ಶಕ್ತಿ ಪಡೆದುಕೊಂಡಿದೆ. ಕೆಲವೇ ಸೆಕೆಂಡ್ ಗಳಲ್ಲಿ ಚಾಲಕ ಒಂಟೆಯ ಜೀವ ಉಳಿಸಿದ. ಈ ದೃಶ್ಯ ನೋಡಿದ ನೆಟ್ಟಿಗರು ಇದೀಗ ಚಾಲಕನ ಬಗ್ಗೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ. ಜೂನ್ 11 ರಂದು ಪೋಸ್ಟ್ ಮಾಡಲಾದ ವೀಡಿಯೊವನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.