ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಅಮರಿಕದ ಜನತೆ ಕ್ರಿಸ್‌ಮಸ್ ಹಬ್ಬವನ್ನು ಆಚರಿಸುವ ಸಂಭ್ರಮದಲ್ಲಿದ್ದರೆ ಅಮೆರಿಕಕ್ಕೆ ಅಪ್ಪಳಿಸಿರೋ ಭೀಕರ ಚಳಿಯು ಹಬ್ಬದ ವಾತಾವರಣವನ್ನು ಮಂಕಾಗಿಸಿದೆ. ʼಬಾಂಬ್ ಶೀತಮಾರುತʼದಿಂದಾಗಿ ಹತ್ತಾರು ಮಿಲಿಯನ್ ಜನರು ಅತ್ಯಂತ ಕೆಟ್ಟ ಚಳಿಯಲ್ಲಿ ಸಿಲುಕಿದ್ದು ಅತ್ಯಂತ ಕನಿಷ್ಟ ತಾಪಮಾನ, ಹಿಮಪಾತದ ಪರಿಸ್ಥಿತಿಗಳು, ವಿದ್ಯುತ್ ಕಡಿತಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಅನೇಕರು ತಮ್ಮ ಶುಕ್ರವಾರದ ರಜಾಕೂಟಗಳನ್ನು ರದ್ದುಗೊಳಿಸಿದ್ದಾರೆ. ವರದಿಗಳ ಪ್ರಕಾರ ಜನಸಂಖ್ಯೆ 60 ಶೇಕಡಾಧಷ್ಟು ಜನರು ಭೀಕರ ಚಳಿಗಾಳಿಗೆ ಸಿಲುಕಿದ್ದಾರೆ ಎನ್ನಲಾಗಿದೆ.
200 ದಶಲಕ್ಷಕ್ಕೂ ಹೆಚ್ಚು ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು ಅತ್ಯಂತ ಕೆಟ್ಟ ಚಳಿಗಾಲದ ಪರಿಸ್ಥಿತಿ ಎದುರಾಗುವ ಕುರಿತು ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡುತ್ತಿದೆ. ಅಲ್ಲದೇ ಶೀತಮಾರುತದಿಂದಾಗಿ ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯವಾಗಿದ್ದು ಸುಮಾರು 1.4 ಮಿಲಿಯನ್ ಮನೆಗಳು ವಿದ್ಯುತ್ ಕಡಿತದಿಂದ ಕತ್ತಲೆಯಲ್ಲಿ ಸಿಲುಕಿವೆ. ಅಲ್ಲದೇ ಅಮೆರಿಕದ ಒಳಗೆ ಅಥವಾ ಹೊರಹೋಗಲೂ ಕೂಡ ದಾರಿಯಿಲ್ಲದಂತಾಗಿದ್ದು ಸುಮಾರು 5 ಸಾವಿರಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು ಇಂತಹ ಶೀತವಾತಾವಾರಣವು ದಶಕಗಳಲ್ಲೇ ಮೊದಲು ಎನ್ನಲಾಗಿದೆ.
ರಸ್ತೆಗಳಲ್ಲಿ ಹಿಮ, ದಾರಿಕಾಣದ ವಾತಾವರಣ ನಿರ್ಮಾಣವಾಗಿರುವುದರಿಂದ ಬಹುತೇಕ ಎಲ್ಲ ಹೆದ್ದಾರಿಗಳನ್ನು ಮುಚ್ಚಲಾಗಿದೆ. ಚಳಿಯಿಂದ ನಿರಾಶ್ರಿತರನ್ನು ಹೊರತರಲು ಸಾಮಾಜಿಕ ಕಾರ್ಯಕರ್ತರು ಹರಸಾಹಸಪಡುತ್ತಿದ್ದಾರೆ. ಹವಾಮಾನ ಸೇವೆಯು ಫಿಲಡೆಲ್ಫಿಯಾದಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚು ಚಳಿಗಾಲದ ಕ್ರಿಸ್‌ಮಸ್ ಅನ್ನು ಮುನ್ಸೂಚಿಸುತ್ತಿದೆ. ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್ ವಾಷಿಂಗ್‌ಟನ್‌ನಲ್ಲಿ ಗಾಳಿಯು 150 mph ವೇಗದಲ್ಲಿ ಚಲಿಸುತ್ತಿದ್ದು ಇದು ಕಳೆದ ದಶಕದಲ್ಲೇ ಅತಿ ಕೆಟ್ಟ ವಾತಾವರಣ ಎನ್ನಲಾಗುತ್ತಿದೆ.