ಚನ್ನಪಟ್ಟಣದಲ್ಲಿ 30 ಸಾವಿರ ಮತಗಳಿಂದ ನಮ್ಮ ಅಭ್ಯರ್ಥಿ ಗೆಲುವು ಖಂಡಿತ: ಜಮೀರ್ ಅಹ್ಮದ್

ಹೊಸದಿಗಂತ ಕಲಬುರಗಿ:

ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ಚನ್ನಪಟ್ಟಣದಲ್ಲಿ ಸರಿಸುಮಾರು 25ರಿಂದ 30 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯಲಿರುವ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಮಗೆ ಎಲ್ಲಕಿಂತ ಚೆನ್ನಾದ ವಾತಾವರಣ ಚನ್ನಪಟ್ಟಣದಲ್ಲಿದ್ದು ಚನ್ನಪಟ್ಟಣದಲ್ಲಿ ನಮ್ಮ ಗೆಲುವಿಗೆ ಬಹಳಷ್ಟು ಅವಕಾಶಗಳಿವೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮತದಾರರ ಅಭಿಪ್ರಾಯ ಆಲಿಸದೇ ಪಾರ್ಲಿಮೆಂಟ್,ಗೆ ಹೋಗಿದ್ದರಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಜನರು ಸೋಲಿಸುವ ತೀರ್ಮಾನ ಮಾಡಿದ್ದಾರೆ.ಹೀಗಾಗಿ ಚನ್ನಪಟ್ಟಣದ ಜನರು ಈಗ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.

ಸಿಪಿ ಯೋಗೇಶ್ವರ್ ಅವರು ಸಹ ತಮ್ಮ ತಾಲ್ಲೂಕಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಯೋಗೇಶ್ವರ್ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಖಾದ್ರಿ ಅವರು ಸಲ್ಲಿಸಿದ ನಾಮಪತ್ರ ವಾಪಸ್ ಪಡೆದಿದ್ದು, ಶಿಗ್ಗಾಂವಿಯಲ್ಲಿ ಯಾವುದೇ ರೀತಿಯ ಅಸಮಾಧಾನ ಇದೀಗ ನಮ್ಮ ಪಕ್ಷದಲ್ಲಿಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಹಾಗೂ ಅವರ ಗೆಲುವಿಗಾಗಿ ಖಾದ್ರಿ ಅವರು ಟೊಂಕ ಕಟ್ಟಿ ಮೈದಾನಕ್ಕೆ ಇಳಿದಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಉಪ ಚುನಾವಣೆ ಹಾಗೂ ನೆರೆಯ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ನಾಯಕರು ವಕ್ಫ್ ಇಸ್ಯೂ ಮಾಡುತ್ತಿದ್ದಾರೆ. ಆದರೆ, ಇದರಿಂದ ಬಿಜೆಪಿಗೆ ಯಾವುದೇ ರೀತಿಯ ಲಾಭ ಆಗುವುದಿಲ್ಲ. ಜನರಿಗೆ ಬಿಜೆಪಿ ಹೇಳುತ್ತಿರುವ ಮಾತುಗಳು ಅರ್ಥವೇ ಆಗುತ್ತಿಲ್ಲ ಎಂದು ಟಾಂಗ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!