ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ತಂಗಡಿಯ ಸೌಜನ್ಯಾಳಿಗೆ ನ್ಯಾಯಕ್ಕೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ನೋಟ ಅಭಿಯಾನಕ್ಕೆ ಕರಾವಳಿ ಭಾಗದಲ್ಲಿ ಅಲ್ಪ ಪ್ರಮಾಣದ ಸ್ಪಂದನೆ ಸಿಕ್ಕಿರುವುದು ಕಂಡುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 10:30ರ ತನಕದ ಮತ ಎಣಿಕೆಯಲ್ಲಿ ನೋಟ 6240 ಮತಗಳನ್ನು ಪಡೆದುಕೊಂಡಿದೆ. ಉಡುಪಿಯಲ್ಲಿ ನೋಟ 2849, ಕಾಸರಗೋಡು ಜಿಲ್ಲೆಯಲ್ಲಿ 674 ಮತಗಳು ನೋಟಾಗೆ ಚಲಾವಣೆಯಾಗಿವೆ.