ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಷ್ಟವೋ ಸುಖವೋ ನಮ್ಮ ಮಕ್ಕಳೇ ನಮಗೆ ಎಲ್ಲಾ, ಎಷ್ಟೇ ಬೈದು ಗೊಣಗಿದರೂ ಕೈಗೆ ಸಣ್ಣ ಗಾಯವಾದ್ರೂ ಸಹಿಸೋದಕ್ಕೆ ಆಗೋದಿಲ್ಲ..
ಇಲ್ಲೊಂದು ದಂಪತಿ ತಮ್ಮ ಮುದ್ದಾದ ಮಗಳನ್ನು ಕಳೆದುಕೊಂಡಿದ್ದಾರೆ. ಶಂಕಿತ ಡೆಂಗ್ಯೂನಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಹಾವೇರಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ರೇಖಾ ದೊಡ್ಡಮನಿ (11) ಎಂದು ಗುರುತಿಸಲಾಗಿದೆ. ಕಳೆದ ಒಂದು ವಾರದಿಂದ ಬಾಲಕಿ ನಿರಂತರವಾಗಿ ಜ್ವರದಿಂದ ಬಳುತ್ತಿದ್ದಳು. ಆಕೆಗೆ ಶಿಗ್ಗಾಂವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಬಾಲಕಿ ಬಲಿಯಾಗಿದ್ದಾಳೆ. ಪೋಷಕರು ಮಗಳಿಲ್ಲದ ಜೀವನ ಯಾರಿಗೆ ಬೇಕು ಎಂದು ಕಣ್ಣೀರಿಡುತ್ತಿದ್ದಾರೆ.