ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೊಮ್ಮೆ ಗುಂಡಿನ ಸದ್ದು ಮಾತ್ರ ಕೇಳಿಸುತ್ತಿದ್ದ ಕಾಶ್ಮೀರದಲ್ಲಿ ಈಗ ಅತಿಥಿಗಳ ಕಲರವ ಕೇಳಿಬರುತ್ತಿದೆ!
ಭೂ ಲೋಕದ ಸ್ವರ್ಗ ಎಂದು ಹೆಸರಾಗಿರುವ ಈ ಕಣಿವೆ ರಾಜ್ಯಕ್ಕೆ ಈಗ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತಿದ್ದು, ಪ್ರವಾಸೋದ್ಯಮದ ಚಿತ್ರಣವೇ ಬದಲಾಗುತ್ತಿದೆ.
ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಲ್ಲಿ ಬರೋಬ್ಬರಿ 12,000 ಹೋಮ್ಸ್ಟೇಗಳು ಬುಕ್ಕಿಂಗ್ ಆಗಿವೆ ಎಂಬುದೇ ಇಲ್ಲಿಗೆ ಪ್ರವಾಸಿಗರು ಎಷ್ಟು ಆಕರ್ಷಿತರಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ. ಇದಲ್ಲದೆ ಇಲ್ಲಿನ ಸ್ಥಳೀಯರೂ ಪ್ರವಾಸಿಗರನ್ನು ಆಕರ್ಷಿಸಲು ತಮ್ಮ ವಸತಿ ಸ್ಥಳಗಳಲ್ಲಿಯೇ ಹೋಮ್ಸ್ಟೇ ಆರಂಭಿಸುತ್ತಿದ್ದಾರೆ. ಕೇರಾನ್, ತಂಗಘಾರ್, ಬಂಗಸ್ ಕಣಿವೆ, ಗುರೇಜ್, ದಾವರ್, ಉರಿ ಮೊದಲಾದ ಗಡಿಪ್ರದೇಶಗಳಲ್ಲಿ ಇನ್ನಷ್ಟು ಹೋಮ್ಸ್ಟೇಗಳು ಆರಂಭವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜಾ ಯಾಕೂಬ್ ಫಾರೂಕ್, ಕಳೆದ ಎರಡು ವರ್ಷಗಳಿಂದ ಕಾಶ್ಮೀರದಲ್ಲಿ ಹೋಮ್ಸ್ಟೇಗಳಿಗೆ ಭೇಟಿ ನೀಡಿದ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಿಷನ್ ಯೂತ್ ಯೋಜನೆಯಡಿಯಲ್ಲಿ ಹೋಮ್ಸ್ಟೇಗಳನ್ನು ಸ್ಥಾಪಿಸಲು ಇಚ್ಛಿಸುವ ಯುವಕ, ಯುವತಿಯರಿಗೆ ಸರ್ಕಾರವೂ ಸಹಾಯಧನ ನೀಡುತ್ತಿದೆ. ಸ್ಥಳೀಯರೇ ಹೋಮ್ಸ್ಟೇ ಪ್ರಾರಂಭಿಸುವುದರಿಂದ ಒಂದೆಡೆ ಪ್ರವಾಸಿಗರ ವಸತಿ ವೆಚ್ಚ ಅಗ್ಗವಾಗುವುದಲ್ಲದೇ ಸ್ಥಳೀಯರಿಗೂ ಆರ್ಥಿಕ ಸಹಾಯ ಸಿಗಲಿದೆ ಎಂದಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಬರುತ್ತಿದ್ದ ಪ್ರವಾಸಿಗರು ಈವರೆಗೆ ತಮ್ಮ ವಸತಿಗಾಗಿ ಪ್ರಮುಖ ನಗರಗಳ ಹೋಟೆಲ್, ರೆಸಾರ್ಟ್ಗಳನ್ನೇ ಅವಲಂಬಿಸಬೇಕಿತ್ತು. ಈ ಸಮಸ್ಯೆಗೆ ಸ್ಥಳೀಯ ಹೋಮ್ಸ್ಟೇಗಳು ಪರಿಹಾರವಾಗಲಿವೆ.
Just see the magic of article 370 removal. The fruit started yielding now.