ಕೇರಳದಲ್ಲಿ ಇನ್ಮುಂದೆ ಶಾಲೆಗಳ ತರಗತಿ ಸಮಯ ಅರ್ಧ ಗಂಟೆ ಹೆಚ್ಚು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇರಳದಲ್ಲಿ ಇನ್ನು ಸರಕಾರಿ ಮತ್ತು ಖಾಸಗಿ ಅನುದಾನಿತ ಹೈಸ್ಕೂಲ್‌ಗಳಲ್ಲಿ ತರಗತಿಗಳ ಅವಧಿ ದಿನದಲ್ಲಿ 30 ನಿಮಿಷಗಳಷ್ಟು ವಿಸ್ತರಿಸಿ ಸರಕಾರ ಆದೇಶಿಸಿದ್ದು, ಇದು ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ.

ಈ ನಿರ್ಧಾರದಂತೆ, ಶಾಲಾ ತರಗತಿಗಳು ಬೆಳಿಗ್ಗೆ 15 ನಿಮಿಷಗಳಷ್ಟು ಬೇಗ ಆರಂಭಗೊಂಡು ಸಂಜೆ ಕಾಲು ಗಂಟೆ ತಡವಾಗಿ ತರಗತಿಗಳು ಕೊನೆಯಾಗುತ್ತದೆ. ಅಂದರೆ ಬೆಳಿಗ್ಗೆ 9.45 ಕ್ಕೆ ಶಾಲೆ ಆರಂಭಗೊಂಡು ಸಂಜೆ 4.15 ಕ್ಕೆ ಶಾಲೆ ಬಿಡುತ್ತದೆ. ಈ ವರ್ಷ ಶಾಲಾರಂಭದ ದಿನ ಜೂ.2 ಆಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಹೇಳಿದ್ದಾರೆ.

ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಈ ಶೈಕ್ಷಣಿಕ ವರ್ಷದಲ್ಲಿ ಏಳು ಶನಿವಾರಗಳಂದು ತರಗತಿಗಳು ನಡೆಯಲಿದೆ. ಆದರೆ ಸತತ ಆರು ಕೆಲಸದ ದಿನಗಳು ಬರದಂತೆ ನೋಡಿಕೊಳ್ಳಲಾಗಿದೆ .ಒಟ್ಟಾರೆಯಾಗಿ ಹೈಸ್ಕೂಲ್‌ಗಳಲ್ಲಿ 205 ಕೆಲಸದ ದಿನಗಳು ಇರಲಿವೆ. ಇದೇ ವೇಳೆ, ಹಿರಿಯ ಪ್ರಾಥಮಿಕ ಕ್ಷ(ಯುಪಿ)ಶಾಲೆಗಳಲ್ಲಿ 200 ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದ್ದು, ಇದರಲ್ಲಿ ಎರಡು ಶನಿವಾರಗಳೂ ಸೇರಿವೆ.ಆದರೆ ಆರು ಸತತ ಕೆಲಸದ ದಿನಗಳು ಬಾರದಂತೆ ,ಈ ಶನಿವಾರಗಳನ್ನು ಯಾವಾಗ ನಿಗದಿಪಡಿಸಬೇಕೆಂಬುದನ್ನು ಯುಪಿ ವಿಭಾಗವೇ ನಿರ್ಧರಿಸಲಿದೆ.

ಕಿರಿಯ ಪ್ರಾಥಮಿಕ (ಎಲ್‌ಪಿ)ಶಾಲಾ ತರಗತಿಗಳನ್ನು , ಸಾರ್ವಜನಿಕ ರಜೆ ಮತ್ತು ಶನಿವಾರಗಳನ್ನು ಹೊರತುಪಡಿಸಿ 198 ಕೆಲಸದ ದಿನಗಳೆಂದು ನಿಗದಿಪಡಿಸಲಾಗಿದೆ. ಈ ವಿಭಾಗಕ್ಕೆ ಇಷ್ಟು ದಿನಗಳು ಶೈಕ್ಷಣಿಕ ನಿಯಮಗಳ ಪಾಲನೆಗೆ ಸಾಕಾಗುತ್ತದೆ ಎಂದು ಹೇಳಲಾಗಿದೆ. ಎಲ್‌ಪಿ ವಿಭಾಗದಲ್ಲಿ ಒಟ್ಟಾರೆ 800 ಶೈಕ್ಷಣಿಕ ಗಂಟೆಗಳ ಅವಽಯನ್ನು ನಿಗದಿಪಡಿಸಲಾಗಿದೆ.ಇದು ಹೈಸ್ಕೂಲ್‌ಗಳಲ್ಲಿ 1,200 ಗಂಟೆಗಳ ನಿಯಮವನ್ನು ಹೊಂದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಚಿವ ವಿ.ಶಿವನ್‌ಕುಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಕಾರ್ಯಕ್ರಮಗಳ ಮೇಲ್ವಿಚಾರಣಾ ಸಮಿತಿ (ಕ್ಯೂಐಪಿ)ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಸಮಯ ಬದಲಾವಣೆಯಿಂದ ಸಮಸ್ಯೆ
ಆದರೆ ಕೇವಲ ಹೈಸ್ಕೂಲ್‌ಗಳಿಗೆ ಈ ಸಮಯ ವಿಸ್ತರಣೆ ಮಾಡುವುದರಿಂದ ಹೈಸ್ಕೂಲ್ ಮತ್ತು ಯುಪಿ ತರಗತಿಗಳನ್ನು ಹೊಂದಿರುವ ಶಾಲೆಗಳಿಗೆ ಸಮಸ್ಯೆಯನ್ನುಂಟು ಮಾಡಲಿದೆ ಎಂದು ಶಿಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಶಾಲಾ ಬಸ್ಸುಗಳ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಇದು ಕಾರಣವಾಗಲಿದೆ. ಈ ವರಗೆ ಹಯರ್‌ಸೆಕೆಂಡರಿ ತರಗತಿಗಳ ಕೆಲಸದ ಸಮಯ 9 ರಿಂದ ಸಂಜೆ 4.45 ರವರೆಗೆ ಇದ್ದು, ವಾರದಲ್ಲಿ 5 ದಿನ(ಸೋಮವಾರದಿಂದ ಶುಕ್ರವಾರದವರೆಗೆ)ಗಳಾಗಿವೆ.ಈ ಶೈಕ್ಷಣಿಕ ವರ್ಷದಲ್ಲಿ ಶಾಲಾರಂಭದ ದಿನ ಜೂ.2 ಆಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸಚಿವ ಶಿವನ್ ಕುಟ್ಟಿ ಸ್ಪಷ್ಟಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!