ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚಳಿ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿದ್ದು, ಜನ ಮನೆಯಿಂದ ಹೊರಬರೋಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ರೀತಿ ಚಳಿ ವಾತಾವರಣ ಇನ್ನೂ ಕೆಲವು ದಿನ ಮುಂದುವರಿಯಲಿದೆ. ಆದರೆ ರಾಜ್ಯದ ಯಾವ ಭಾಗದಲ್ಲಿಯೂ ಇನ್ನೂ ಐದು ದಿನ ಮಳೆಯಾಗುವುದಿಲ್ಲ. ಕರಾವಳಿ ಭಾಗದ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಒಣ ಹವೆ ಇರಲಿದೆ.
ಇಡೀ ರಾಜ್ಯದಲ್ಲಿ ಇನ್ನೂ ಒಂದು ದಿನ ಮೋಡ ಕವಿದ ವಾತಾವರಣ ಇರಲಿದೆ. ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇರಲಿದೆ. ಗರಿಷ್ಠ 27 ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಶಿಯಸ್ ಇರುವ ಸಾಧ್ಯತೆ ಇದೆ.
ಚಳಿಗಾಲದಲ್ಲಿ ಆರೋಗ್ಯವಾಗಿರೋಕೆ ಈ ಸಲಹೆಗಳನ್ನು ಪಾಲಿಸಿ..
- ಚಳಿ ಎಂದು ಕಡಿಮೆ ನೀರು ಕುಡಿಬೇಡಿ, ಬಿಸಿನೀರಾದ್ರೂ ಪರವಾಗಿಲ್ಲ ನೀರು ಕುಡಿಯುತ್ತಲೇ ಇರಿ.
- ಪ್ರತಿದಿನ ವ್ಯಾಯಾಮ, ಜಿಮ್, ವಾಕ್ ಏನಾದ್ರೂ ಒಂದು ಅಭ್ಯಾಸ ಇರಲಿ
- ಒಮೆಗಾ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ
- ಆಹಾರದಲ್ಲಿ ಹೆಚ್ಚು ಫೈಬರ್ ಅಂಶ ಇರಲಿ, ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ಪದಾರ್ಥ ಕಡಿಮೆ ಮಾಡಿ.
- ಹೆಚ್ಚು ತರಕಾರಿ, ಹಣ್ಣುಗಳ ಸೇವನೆ, ಅದರಲ್ಲಿಯೂ ದಿನಕ್ಕೊಂದು ಕಿತ್ತಳೆ ಸೇವಿಸಿ.
- ಬೆಳಗ್ಗೆ ಖಾಲಿ ಹೊಟ್ಟೆಗೆ ತುಳಸಿಗೆ ಜೇನುತುಪ್ಪ ಹಾಕಿ ಸೇವಿಸಿ