ಪಂಚರತ್ನ ಯಾತ್ರೆಯಲ್ಲಿ ಜನರ ಸುನಾಮಿ ಅಲೆ ಎದ್ದಿದೆ: ಹೆಚ್‌ಡಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಕ್ತ ಹೀರುವವರನ್ನು ನಿಮ್ಮ ನಾಯಕರಾಗಿ ಮಾಡುತ್ತೀರಾ ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು‌ ನೀಡಿದ್ದಾರೆ.

ದೇವನಹಳ್ಳಿಯಲ್ಲಿ ಪಂಚರತ್ನ ರಥಯಾತ್ರೆಯ ಸಂದರ್ಭ  ಮಾಧ್ಯಮದೊಂದಿಗೆ ಮಾತನಾಡಿದ ಎಚ್​ ಡಿಕೆ, ನಾನು ಜಿಲ್ಲೆಯ ಅಭಿವೃದ್ಧಿಗೆ 9 ಸಾವಿರ ಕೋಟಿ ರೂ ಕೊಟ್ಟಿದ್ದೆ. ಆದರೆ ಆ ಹಣವನ್ನು ಬಿಜೆಪಿ ಬೇರೆ ಕಡೆ ವರ್ಗಾವಣೆ ಮಾಡಿತ್ತು. ಆಗ ಇಲ್ಲದ ಅಭಿಮಾನ ಈಗ ಮಂಡ್ಯದ ಮೇಲೆ ಅಶ್ವಥ್ ನಾರಾಯಣ್​ಗೆ ಯಾಕೆ ಎಂದು ಟಾಂಗ್​ ನೀಡಿದ್ದಾರೆ.

ದೇಶದಲ್ಲಿ ನರ ಬಲಿ ಪಡೆದದ್ದು, ಅಧಿಕಾರಕ್ಕಾಗಿ ರಕ್ತದೋಕುಳಿ ಹರಿಸಿದ್ದು ಯಾರು ಎಂದು ಪ್ರಶ್ನಿಸಿದರು.

ಪಂಚರತ್ನ ರಥ ಯಾತ್ರೆ ಕುರಿತು ಮಾತನಾಡಿದ ಹೆಚ್​ ಡಿ ಕೆ, ನನ್ನ ಪಂಚರತ್ನ ಯಾತ್ರೆಯಲ್ಲಿ ಜನರ ಸುನಾಮಿ ಅಲೆ ಎದ್ದಿದೆ. ಇದು ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ ನನ್ನ ಬಗ್ಗೆ ಮಾತನಾಡುವ ನೈತಿಕತೆಯನ್ನು ಯಾರೂ ಉಳಿಸಿಕೊಂಡಿಲ್ಲ. ಇನ್ನು ಮುಂದೆ ನಾನೇ ಎಲ್ಲರ ಟಾರ್ಗೆಟ್ ಅಂತ ಗೊತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here