ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಫಲೋಡಿಯಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು,ನಿರಂತರ ಶಾಖದ ಅಲೆಯಿಂದಾಗಿ ಕಳೆದ 7 ದಿನಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.
ಹರಿಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಸಾಂಪ್ರದಾಯಿಕವಾಗಿ ವರ್ಷದ ಒಂಬತ್ತು ದಿನಗಳನ್ನು ಅತ್ಯಂತ ಶಾಖದ ದಿನಗಳು ಎಂದು ಪರಿಗಣಿಸಲ್ಪಟ್ಟಿರುವ ನೌತಪವು ಬೇಸಿಗೆಯ ಆರಂಭದೊಂದಿಗೆ ಜ್ಯೇಷ್ಠ ಮಾಸದಲ್ಲಿ ಪ್ರಾರಂಭವಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಸೂರ್ಯನು ಚಂದ್ರನ ನಕ್ಷತ್ರ ಅಂದರೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿದಾಗ ನೌತಪ ಪ್ರಾರಂಭವಾಗುತ್ತದೆ. ನೌತಪ ಅಥವಾ ನವತಾಪದ ಐದನೇ ದಿನದಂದು, ರಾಜಸ್ತಾನದಲ್ಲಿ ಒಂದೂವರೆ ವರ್ಷದ ಬಾಲಕಿ ಮತ್ತು ಸರಪಂಚ ಸೇರಿದಂತೆ ಇನ್ನೂ ನಾಲ್ಕು ಜನರು ತೀವ್ರ ಶಾಖಕ್ಕೆ ಬಲಿಯಾಗಿದ್ದಾರೆ.
ಅಧಿಕ ತಾಪಮಾನ ಸಂಬಂಧಿತ ಘಟನೆಗಳಿಂದ ಸತ್ತವರ ಸಂಖ್ಯೆಯನ್ನು ಏಳು ದಿನಗಳಲ್ಲಿ 55 ಕ್ಕೆ ಏರಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಬುಧವಾರ ಮತ್ತು ಗುರುವಾರದಂದು ಶಾಖದ ರೆಡ್ ಅಲರ್ಟ್ ಘೋಷಿಸಲಾಗಿದೆ.