ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ಕುಮಾರ್‌ಗೆ ಹಿನ್ನಡೆ, ಗೆಲುವಿನತ್ತ ಬಿ.ವೈ. ರಾಘವೇಂದ್ರ

ದಿಗಂತ ವರದಿ ಶಿವಮೊಗ್ಗ :

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಇದುವರೆಗೆ ನಡೆದ ಸುಮಾರು 18 ಸುತ್ತುಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸುಮಾರು 2 ಲಕ್ಷಕ್ಕೂ ಅಧಿಕ‌ಮತಗಳ ಅಂತರದಿಂದ ಮುಂದಿರುವುದರಿಂದ ಕಾರ್ಯಕರ್ತರು, ಮುಖಂಡರು‌ ಜಿಲ್ಲಾ ಬಿಜೆಪಿ‌ ಕಚೇರಿ ಮುಂದೆ ಜಮಾಯಿಸಿದ್ದಾರೆ.

ವಿಜಯೋತ್ಸವಕ್ಕೆ ಅಲಂಕೃತ ತೆರೆದ ವಾಹನವನ್ನು‌ ಸಿದ್ಧಪಡಿಸಿದ್ದು, ಪಟಾಕಿಗಳ ಸುರಿಮಳೆ ಸುರಿಸಲಾಗುತ್ತಿದೆ. ನಿಷೇಧಾಜ್ಞೆಯ ನಡುವೆಯೂ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲುಮುಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!